ಆಯುಧ ಪೂಜೆ ವಿಜಯ ದಶಮಿಯ ಆಫ್ಟರ್ ಎಫೆಕ್ಟ್, ನಗರದಲ್ಲಿ ಎಲ್ಲೆಂದರಲ್ಲಿ ಕಸ

ಶನಿವಾರ, 16 ಅಕ್ಟೋಬರ್ 2021 (21:42 IST)
ಬೆಂಗಳೂರು: ಆಯುಧ ಪೂಜೆ ಮತ್ತು ವಿಜಯ ದಶಮಿ ಹಬ್ಬದ ದಿನದ ಸಾಮಾನ್ಯ ದಿನಗಳಿಗಿಂತ ಹೆಚ್ಚು ತ್ಯಾಜ್ಯ ಸೃಷ್ಟಿ. ಈ ಮಧ್ಯೆ ಮಳೆ ನಿರಂತರವಾಗಿ ಸುರಿಯುತ್ತಿರುವ ಪರಿಣಾಮ ಮಳೆ ಸುರಿದಾಗ ಜೊತೆಗೆ ಪ್ರವಾಹದ ಪರಿಸ್ಥಿತಿ ಜೊತೆಗೆ ಕಸ ವಿಲೇವಾರಿ ಸಮಸ್ಯೆ ಕೂಡ ತಲೆದೂರಿದೆ. ಪಾಲಿಕೆಗೂ ಕೂಡ ತಲೆನೋವಾಗಿ ಪರಿಣಮಿಸಿದೆ. 
ಹಬ್ಬದ ಸಮಯದಲ್ಲಿ ಸುತ್ತಲಿನ ಗ್ರಾಮಾಂತರ ಪ್ರದೇಶಗಳಿಂದ ಬಾಳೆಕಂದು, ಮಾವಿನ ಎಲೆ, ಬೂದು ಕುಂಬಳಕಾಯಿ ಸಾಕಷ್ಟು ಪ್ರಮಾಣದಲ್ಲಿ ಬಂದಿತ್ತು. ಶುಕ್ರವಾರ ಸಂಜೆಯಾಗುತ್ತಿರುವಂತೆ ರೈತರು ಹಾಗೂ ವ್ಯಾಪಾರಿಗಳು ತಂದಿರುವ ವಸ್ತುಗಳು ಅಲ್ಲಲ್ಲಿ ಬಿಟ್ಟು ಹೋಗುತ್ತಿರುವುದು ಕಂಡುಬಂದಿದೆ.    
 
ಮಳೆಯಿಂದ ಕಸ ವಿಲೇವಾರಿಗೆ ಪರದಾಡುತ್ತಿರುವ ಪಾಲಿಕೆ ಸಿಬ್ಬಂದಿ: 
 
ಈ ತ್ಯಾಜ್ಯ ತೆರವುಗೊಳಿಸುವಷ್ಟರಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಸದ ವಿಲೇವಾರಿಗೆ ಅಡತಡೆ ಉಂಟಾಗಿದೆ. ಮುಂದಿನ ಸೋಮವಾರದವರೆಗೆ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ. ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಮಡಿವಾಳ, ಕೆ.ಆರ್. ಪುರ ಅಗತ್ಯವಿರುವ ಪ್ರಮುಖ ಮಾರುಕಟ್ಟೆಯಲ್ಲಿ ತ್ಯಾಜ್ಯ ಕಂಡುಬಂದಿದೆ. ರಸ್ತೆ ಬದಿಗಳಲ್ಲಿ ಬಾಳೆಕಂದು, ಮಾವಿನ ಎಲೆ ಬಿದ್ದಿದ್ದರಿಂದ ಮಳೆ ನೀರಿನಲ್ಲಿ ಅದು ಸೇರಿಕೊಂಡು, ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯಲು ಮತ್ತಷ್ಟು ಅಡ್ಡಿ ಉಂಟುಮಾಡಿದ ಘಟನೆಗಳು ಅಲ್ಲಲ್ಲಿ ವರದಿಯಾಗಿವೆ.
 
ಪಾಲಿಕೆ ಅಧಿಕಾರಿಗಳ ಸ್ಪಷ್ಟನೆ: 
 
ಬೇರೆ ಕಡೆಗಳಲ್ಲಿ ಪಾಲಿಕೆ ಸಿಬ್ಬಂದಿ ಮಳೆಯಲ್ಲೇ ಭೇಟಿ ನೀಡಿ, ತೆರವುಗೊಳಿಸುತ್ತಿದ್ದರೂ. ಇನ್ನು ಹಲವೆಡೆ ತ್ಯಾಜ್ಯವನ್ನು ಕಾಂಪ್ಯಾಕ್ಟರ್ ನಿರ್ದಿಷ್ಟವಾಗಿ ತುಂಬಿ ನಿಲ್ಲಿಸಲಾಗಿಲ್ಲ, ಲ್ಯಾಂಡ್‌ಫಿಲ್ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಹೋಗಲು ಆಡ್ಡಿಯಾಗಿದೆ, ಭಾನುವಾರದ ಹೊತ್ತಿಗೆ ವಿಲೇವಾರಿ ಆಗುತ್ತಿದೆ 
 
ಆಯುಧ ಪೂಜೆ ಮತ್ತು ವಿಜಯದಶಮಿ ಒಳಗೊಂಡ ನಂತರ ಕೆಲವು ದಿನಗಳಲ್ಲಿ 6,200 ರಿಂದ 6,500 ಟ ಬಳಕೆಯ ತ್ಯಾಜ್ಯ ಸೃಷ್ಟಿಯಾಗಿದ್ದು, ಇವುಗಳ ತೆರವಿಗೆ ನಗರದಲ್ಲಿರುವ ಅಂದಾಜು 591 ಕಾಂಪ್ಯಾಕ್ಟರ್‌ಗಳನ್ನು ನಿರ್ವಹಿಸುತ್ತಿದೆ ಎಂದರ್ಥ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ