ಮತ್ತೆ ಶುರುವಾಯ್ತು ಕಾಂಗ್ರೆಸ್ ನಲ್ಲಿ ನಾ ಕೊಡೆ, ನಾ ಬಿಡೆ ಜಗಳ!
ಹಿರಿಯ ನಾಯಕರಿಗೆ ಈ ಬಾರಿ ಸಚಿವರ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬಣ ಒತ್ತಾಯಿಸುತ್ತಿದೆ. ರಾಮಲಿಂಗಾ ರೆಡ್ಡಿ, ಎಚ್ ಕೆ ಪಾಟೀಲ್ ರಂತಹ ಹಿರಿಯ ನಾಯಕರಿಗೆ ಸಚಿವ ಸ್ಥಾನ ನೀಡಲು ಒತ್ತಾಯ ಹೆಚ್ಚಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಿರಿಯರಿಗೆ ಸಚಿವ ಸ್ಥಾನ ನೀಡುವ ಕುರಿತು ಚರ್ಚೆ ನಡೆದಿರುವುದು ನಿಜ. ಆದರೆ ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸಲಿದೆ. ಈಗಾಗಲೇ ಸಚಿವರಾಗಿರುವ ಶಾಸಕರ ಸ್ಥಾನ ಪಲ್ಲಟ ಕುರಿತು ಬಂದಿರುವ ಸುದ್ದಿಗಳೆಲ್ಲವೂ ಊಹಾಪೋಹ. ಹೊಸ ಖಾತೆಗಳ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದಿದೆ.