ಮತ್ತೆ ಜೋರಾಯ್ತು ಪೋಸ್ಟರ್ ಪಾಲಿಟಿಕ್ಸ್
ಆರ್ ಆರ್ ನಗರಕ್ಕೆ ಮಂಜೂರಾಗಿದ್ದ 10 ಸಾವಿರ ಕೋಟಿ ರೂ. ಎಲ್ಲಿ ಹೋಯ್ತು?ಎಂಬ ಪ್ರಶ್ನೆ ನಿರ್ಮಾಣವಾಗಿದೆ.ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಪೋಸ್ಟರ್ ಗಳು ದಿಢೀರನೆ ಕಾಣಿಸಿಕೊಂಡಿದ್ದು, ಸ್ಥಳೀಯ ಶಾಸಕ ಮುನಿರತ್ನ ವಿರುದ್ಧದ ಬರಹಗಳಿರುವ ಪೋಸ್ಟರ್'ಗಳು ರಾರಾಜುಸುತ್ತಿದೆ.ನೊಂದ ಗುತ್ತಿಗೆದಾರರು ಪ್ರಾಯೋಜಿಸುವ Guess & Win Contet,Gues & Win Contest ಎಂದು ಪೋಸ್ಟರ್ ಗಳಲ್ಲಿ ಬರೆಸಲಾಗಿದೆ.2013 ರಿಂದ ಇಲ್ಲಿಯವರೆಗೆ 10 ಸಾವಿರ ಕೋಟಿ ರೂ.ಗಳನ್ನು ಶಾಸಕ ಮುನಿರತ್ನಂ ಮಂಜೂರು ಮಾಡಿಸಿಕೊಂಡಿದ್ದಾರೆ.ಆದರೆ ರಸ್ತೆ, ಪಾರ್ಕ್, ಕೆರೆಗೆ ವಿನಿಯಪೊಗಿಸಿರುವುದು 2 ರಿಂದ 3 ಸಾವಿರ ಕೋಟಿ ರೂ.ಉಳಿದ ಹಣ ಎಲ್ಲಿ ಹೋಯ್ತು? ಊಹಿಸಿ ಅಥವಾ 10 ಸಾವಿರ ಕೋಟಿ ರೂ. ಕಾಮಗಾರಿ ತೋರಿಸುವುದಾದರೆ ಕರೆ ಮಾಡಿ ಅತ್ಯಾಕರ್ಷಕ ಉಡುಗೊರೆ ಗೆಲ್ಲಿ.8447704040 ಈ ನಂಬರ್ ಗೆ ಕಾಲ್ ಮಾಡಿ ಎಂದು ಪೋಸ್ಟರ್ ಗಳನ್ನ ಹಾಕಲಾಗಿದೆ.ಮುನಿರತ್ನಂ ಕಚೇರಿ, ಆರ್ ಆರ್ ನಗರ ಆರ್ಚ್, ಬಸ್ ನಿಲ್ದಾಣಗಳಲ್ಲಿ ಪೋಸ್ಟರ್ ಗಳು ಕಂಡು ಬಂದಿದೆ.