ತುಮಕೂರಿನಲ್ಲಿ ರೆಡ್ಮಿ ನೋಟ್ 4 ಮೊಬೈಲ್ ಸ್ಫೋಟ
ತುಮಕೂರು: ಮತ್ತೊಂದು ರೆಡ್ ಮಿ ಮೊಬೈಲ್ ಸ್ಫೋಟವಾಗಿದೆ. ನಗರದ ಟೌನ್ ಹಾಲ್ ಸರ್ಕಲ್‌ನಲ್ಲಿರುವ ಮೊಬೈಲ್ ಅಂಗಡಿಯಲ್ಲಿ ರೆಡ್ ಮಿ ನೋಟ್ 4 ಮೊಬೈಲ್ ಸ್ಫೋಟವಾಗಿದೆ.
ಬೆಂಗಳೂರಿನಲ್ಲಿಯೂ 2 ತಿಂಗಳ ಹಿಂದೆ ಇಂತಹದ್ದೇ ಘಟನೆ ನಡೆದಿತ್ತು. ರೆಡ್‌ಮಿ ನೋಟ್ 4 ಮೊಬೈಲ್ ಇತ್ತೀಚೆಗೆ ಹೆಚ್ಚು ಮಂದಿ ಬಳಸುತ್ತಿದ್ದಾರೆ. ಇದೀಗ ಮತ್ತೆ ಅದೇ ಕಂಪನಿಯ ಮೊಬೈಲ್ ಸಿಡಿದಿದ್ದು, ರೆಡ್‌ಮಿ ನೋಟ್ 4 ಬಳಸುತ್ತಿರುವ ಗ್ರಾಹಕರು ಗಾಬರಿಗೊಂಡಿದ್ದಾರೆ.