ಬಿಜೆಪಿಯಲ್ಲಿ ಮತ್ತೆ ಅಸಮಧಾನ? ಈಶ್ವರಪ್ಪ ನೇತೃತ್ವದಲ್ಲಿ ಇಂದು ಸಭೆ

ಶನಿವಾರ, 11 ಫೆಬ್ರವರಿ 2017 (09:30 IST)
ಬೆಂಗಳೂರು: ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿಯಾದ ಬಳಿಕ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ತಣ್ಣಗಾಗಿದೆ ಎಂದುಕೊಳ್ಳುತ್ತಿರುವಾಗಲೇ ಮತ್ತೆ ಅಸಮಧಾನದ ಹೊಗೆ ಕಾಣುತ್ತಿದೆ. ಇಂದು ಬಂಡಾಯ ನಾಯಕ ಈಶ್ವರಪ್ಪ ನೇತೃತ್ವದಲ್ಲಿ ಅತೃಪ್ತರ ಸಭೆ ನಡೆಯಲಿದೆ.

 
ಶಾಸಕರ ಭವನದಲ್ಲಿ ಈಶ್ವರಪ್ಪ ಮತ್ತು ಬೆಂಬಲಿಗರು ಸಭೆ ನಡೆಸಲಿದ್ದಾರೆ. ರಾಷ್ಟ್ರಾಧ್ಯಕ್ಷರ ಎದುರು ಒಪ್ಪಿಕೊಂಡಂತೆ ಪದಾಧಿಕಾರಿಗಳ ಬದಲಾವಣೆ ಇನ್ನೂ ಆಗಿಲ್ಲ. ಈಗಾಗಲೇ ಹೇಳಿದ ಅವಧಿ ಮುಗಿದರೂ ಇದರ ಬಗ್ಗೆ ಚಕಾರವೆತ್ತದೇ ಇರುವುದು ಈಶ್ವರಪ್ಪ ಬೆಂಬಲಿಗರ ಅತೃಪ್ತಿಗೆ ಕಾರಣವಾಗಿದೆ.

ರಾಯಣ್ಣ ಬ್ರಿಗೇಡ್ ನಲ್ಲಿ ಪಾಲ್ಗೊಂಡ ಕೆಲ ಪದಾಧಿಕಾರಿಗಳ ಅಮಾನತು ಹಿಂಪಡೆಯಬೇಕು, ಈಗಾಗಲೇ ಆಯ್ಕೆಯಾಗಿರುವ ಪದಾಧಿಕಾರಿಗಳ ಬದಲಾವಣೆ ಆಗಬೇಕು ಎಂದು ಈಶ್ವರಪ್ಪ ಒತ್ತಾಯಿಸಿದ್ದಾರೆ. ಇದೇ ವೇಳೆ ರಾಯಣ್ಣ ಬ್ರಿಗೇಡ್ ನಿಂದ ಯಾವುದೇ ಸಮಾವೇಶ ಮಾಡದಿರಲು ಮತ್ತು ಇದರಿಂದ ಈಶ್ವರಪ್ಪ ಹಿಂದೆ ಸರಿಯುವ ಕುರಿತು ಇಂದಿನ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ