ಸಿಎಂ ಸಿದ್ದುಗೆ ಮತ್ತೆ ಬ್ಯಾಡ್ 'ಟೈಮ್'

ಶುಕ್ರವಾರ, 7 ಅಕ್ಟೋಬರ್ 2016 (14:19 IST)
ಹ್ಯೂಬ್ಲೊಟ್ ವಾಚ್‌ ಗಿಫ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಖಾಸಗಿ ದೂರು ದಾಖಲಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಮಹಾದೇವಪ್ಪ ಸೇರಿದಂತೆ 6 ಜನರ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಟಿ.ಜೆ.ಅಬ್ರಾಹಂ ಅವರು ಖಾಸಗಿ ದೂರು ದಾಖಲಿಸಿದ್ದಾರೆ.
 
ಅಕ್ರಮ ಆಸ್ತಿ ಪ್ರಕರಣದ ಅನುಮತಿ ತಿರಸ್ಕಾರಕ್ಕಾಗಿ ಎಂಜನಿಯರ್ ರಘು ಎನ್ನುವವರು 30 ಲಕ್ಷ ರೂಪಾಯಿ ಮೌಲ್ಯದ ಮೂರು ಹ್ಯೂಬ್ಲೊ ವಾಚ್‌ ಗಿಫ್ಟ್ ಆಗಿ ನೀಡಿದ್ದರು. ಈ ಕುರಿತು ಎಸಿಬಿಗೆ ದೂರು ನೀಡಿ 4 ತಿಂಗಳು ಕಳೆದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ