ನಾಳೆ 92ನೇ ಹುಟ್ಟುಹಬ್ಬವನ್ನು ಆಚರಿಸಲಿರುವ ದೇವೇಗೌಡರಿಗೆ ಸರ್ಪ್ರೈಸ್ ನೀಡಿದ ಏರ್‌ ಇಂಡಿಯಾ ಸಿಬ್ಬಂದಿ

Sampriya

ಶನಿವಾರ, 17 ಮೇ 2025 (15:34 IST)
Photo Credit X
ಬೆಂಗಳೂರು: ನಾಳೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅವರು 92ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಹುಟ್ಟುಹಬ್ಬ ಹಿನ್ನೆಲೆ ಏರ್‌ ಇಂಡಿಯಾ ವಿಮಾನದಲ್ಲಿ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಸರ್ಪ್ರೈಸ್‌ ನೀಡಲಾಯಿತು. ‌

ದೇವೇಗೌಡರು ತಮ್ಮ ಹುಟ್ಟುಹಬ್ಬದ ಅಂಗವಾಗಿ ನಾಳೆ ಮುಂಜಾನೆ ತಿರುಮಲದ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆಯಲಿದ್ದಾರೆ.

ಇಂದು ಸಂಜೆ ಹೆಚ್‌ ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ತಿರುಪತಿಗೆ ಪ್ರಯಾಣ ಮಾಡಲಿದ್ದಾರೆ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ದೇವೇಗೌಡರು ಸೇರಿದಂತೆ ಅವರ ಕುಟುಂಬದ 20ಕ್ಕೂ ಹೆಚ್ಚು ಸದಸ್ಯರು ದೇವೇಗೌಡರೊಂದಿಗೆ ತಿರುಪತಿಗೆ ತೆರಳಲಿದ್ದಾರೆ.

ಇಂದು ರಾತ್ರಿ ತಿರುಮಲದಲ್ಲಿ ವಾಸ್ತವ್ಯ ಇರಲಿರುವ ಗೌಡರು ಮತ್ತು ಕುಟುಂಬದವರು ಮುಂಜಾನೆ ವೆಂಕಟೇಶ್ವರಸ್ವಾಮಿ ದರ್ಶನ ಪಡೆಯಲಿದ್ದಾರೆ. ನಂತರ ಅತಿಥಿಗೃಹವೊಂದನ್ನು ಉದ್ಘಾಟನೆ ಮಾಡಲಿದ್ದಾರೆ. ನಾಳೆ ಬೆಳಿಗ್ಗೆ ಗೌಡರು ಬೆಂಗಳೂರಿಗೆ ಮರಳುವ ಕಾರ್ಯಕ್ರಮವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ