ಎಲ್ಲ ಭಾಷಿಕರನ್ನ ಒಂದೇ ರೀತಿ ನೋಡಬೇಕು - ಸಿಎಂ

ಮಂಗಳವಾರ, 22 ನವೆಂಬರ್ 2022 (14:18 IST)
ಮಹಾರಾಷ್ಡ್ರ ಗಡಿವಿಷಯವಾಗಿ ಸಿಎಂ ಪ್ರತಿಕ್ರಿಯಿಸಿದ್ದು,ಎರಡು ರಾಜ್ಯಗಳು ಸೌಹಾರ್ದತೆಯಿಂದ ಇರಬೇಕು.ನಾವು ಎಲ್ಲ ಭಾಷಿಕರನ್ನೂ ಒಂದೇ ರೀತಿಯಲ್ಲಿ ನೋಡ್ಕೊಳ್ತಿದ್ದೇವೆ.ಮಹಾರಾಷ್ಟ್ರ ದಲ್ಲಿ ದೊಡ್ಡ ಪ್ರಮಾಣದಲ್ಲಿ ಕನ್ನಡಿಗರು ಇದ್ದಾರೆ.ಅವರ ಹಿತರಕ್ಷಣೆಯನ್ನು ಮಾಡಬೇಕಾದ ಕರ್ತವ್ಯ ನಮ್ಮದು, ನಾವು ಆ ಕೆಲಸವನ್ನು ಮಾಡ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ‌ ಕಾವೇರಿ ನಿವಾಸದಲ್ಲಿ ಹೇಳಿದ್ದಾರೆ.
 
ಮರಾಠಿಗರ ನಿಯೋಗ ಭೇಟಿ ಮಾಡಿ ಅಂತ ಮಹಾ ಸಿಎಂ ಏಕನಾಥ ಶಿಂಧೆ ಕರೆ ವಿಚಾರವಾಗಿ ಸಿಎಂ ಪ್ರತಿಕ್ರಿಯಿಸಿದ್ದು,ನಿಯೋಗ ಬರೋದು ದೊಡ್ಡ ವಿಷಯ ಅಲ್ಲ.ನಮ್ಮ ನಿಯೋಗ ಅವರ ಭೇಟಿ ಮಾಡುತ್ತೆ.ಅವರ ನಿಯೋಗ ನಮಗೆ ಭೇಟಿ ಮಾಡೋದು ಸಹಜ.ಇದೆಲ್ಲ ಪರಿಗಣೆಗೆ ಬರಲ್ಲ ಎಂದು ಸಿಎಂ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ