ಬೆಂಗಳೂರು : ಬಿಬಿಎಂಪಿ ಬಾಕಿ ಬಿಲ್ ನೀಡುವ ವಿಚಾರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ವಿಧಿಸಿರುವ ನಿಯಮಗಳ ವಿರುದ್ಧ ಗುತ್ತಿಗೆದಾರರ ಸಂಘ ಹೊರಾಟಕ್ಕೆ ಮುಂದಾಗಿದೆ.
ಸರ್ಕಾರ ತಡೆಹಿಡಿದ ಹಣ ಬಿಡುಗಡೆ ಮಾಡುವವರೆಗೂ ಬೆಂಗಳೂರಿನ ಎಲ್ಲಾ ಕಾಮಗಾರಿಗಳನ್ನು ಬಂದ್ ಮಾಡಲು ಗುತ್ತಿಗೆದಾರರ ಸಂಘ ತೀರ್ಮಾನಿಸಿದೆ. ಹಣ ಸ್ಥಗಿತ ಆದಾಗಲೇ 60% ಕಾಮಗಾರಿ ಸ್ಥಗಿತ ಆಗಿತ್ತು. ಕೇವಲ 40% ಕಾಮಗಾರಿ ನಡೆಯುತ್ತಿದ್ದವು.
ಸರ್ಕಾರದಿಂದ 2,700 ಕೋಟಿ ರೂ. ಬಿಡುಗಡೆಯಾಗಬೇಕಿದೆ. ಈಗ ಹಣ ಬಿಡುಗಡೆ ಮಾಡುವವರೆಗೂ ಆ ಕಾಮಗಾರಿಗಳನ್ನು ಸ್ಥಗಿತ ಮಾಡುವುದಾಗಿ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿವಿಧ ಕಾಮಗಾರಿಗಳ 2700 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಬಿಬಿಎಂಪಿಯ ಬಾಕಿ ಬಿಲ್ ನೀಡಲು 26 ಅಂಶಗಳ ಮಾಹಿತಿ ಸಲ್ಲಿಕೆಯನ್ನು