ಚುನಾವಣಾ ಬಾಂಡ್ ನೆಪದಲ್ಲಿ ಸುಲಿಗೆ ಆರೋಪ: ಬಿವೈ ವಿಜಯೇಂದ್ರಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್‌

Sampriya

ಮಂಗಳವಾರ, 17 ಡಿಸೆಂಬರ್ 2024 (19:21 IST)
ಬೆಂಗಳೂರು: ಚುನಾವಣಾ ಬಾಂಡ್ ಗಳ ನೆಪದಲ್ಲಿ ಹಣ ಸುಲಿಗೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ನ್ನು ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಈ ಮೂಲಕ ಬಿವೈ ವಿಜಯೇಂಧ್ರಗೆ ಬಿಗ್‌ ರಿಲೀಫ್ ಸಿಕ್ಕಿದೆ.

ನಗರದ ಸಾಮಾಜಿಕ ಹೋರಾಟಗಾರ ಆದರ್ಶ ಆರ್ ಅಯ್ಯರ್ ಎಂಬುವರು ದಾಖಲಿಸಿದ್ದ ದೂರಿನ ಆಧಾರದ ಮೇಲೆ ಬೆಂಗಳೂರು ಪೊಲೀಸರು ಸೆಪ್ಟೆಂಬರ್ ನಲ್ಲಿ ಎಫ್ ಐಆರ್ ದಾಖಲಿಸಿದ್ದರು. ಚುನಾವಣಾ ಬಾಂಡ್‌ಗಳ ನೆಪದಲ್ಲಿ ಸಂಪೂರ್ಣ ಸುಲಿಗೆ ದಂಧೆಯಲ್ಲಿ ವಿವಿಧ ಹಂತದ ಬಿಜೆಪಿ ನಾಯಕರು ಕೈ ಜೋಡಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು. ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 384 (ಸುಲಿಗೆ), 120 ಬಿ (ಅಪರಾಧದ ಪಿತೂರಿ) ಮತ್ತು 34 ಸಾಮಾನ್ಯ ಉದ್ದೇಶದಡಿ ಪ್ರಕರಣ ದಾಖಲಿಸಲಾಗಿತ್ತು.

 ಇದರೊಂದಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಇಡಿ ಅಧಿಕಾರಿಗಳು ಹಾಗೂ ಬಿಜೆಪಿ ರಾಷ್ಟ್ರ ರಾಜ್ಯ ಮಟ್ಟದ ಪದಾಧಿಕಾರಿಗಳ ವಿರುದ್ದವೂ ಎಫ್ಐಆರ್ ದಾಖಲಾಗಿತ್ತು.

ಆ ಸಂದರ್ಭದಲ್ಲಿ ವಿಜಯೇಂದ್ರ ಬಿಜೆಪಿ ಉಪಾಧ್ಯಕ್ಷರಾಗಿದ್ದರೆ ಮತ್ತೋರ್ವ ಆರೋಪಿ ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಕಟೀಲ್ ವಿರುದ್ಧದ ಪ್ರಕರಣವನ್ನು ಕೋರ್ಟ್ ಡಿಸೆಂಬರ್ 3 ರಂದು ರದ್ದುಗೊಳಿಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ