ನ್ಯಾಯಾಂಗ ನಿಂದನೆ ತೂಗುಗತ್ತಿ ಬೆನ್ನಲ್ಲೇ ಕ್ಷಮೆ ಕೇಳಿದ ಸಚಿವ ಜಮೀರ್ ಅಹ್ಮದ್

Sampriya

ಗುರುವಾರ, 26 ಸೆಪ್ಟಂಬರ್ 2024 (19:04 IST)
Photo Courtesy X
ಬೆಂಗಳೂರು: ಹೈಕೋರ್ಟ್ ತೀರ್ಪನ್ನು ಪೊಲಿಟಿಕಲ್ ಜಡ್ಜ್‌ಮೆಂಟ್ ಎಂದಿದ್ದ ಸಚಿವ ಜಮೀರ್ ಅಹ್ಮದ್ ಅವರು ಇದೀಗ ಬಾಯಿ ತಪ್ಪಿನಿಂದ ನಾನು ಒಂದು ಪದ ಬಳಸಿದ್ದೆ ಸಮರ್ಥನೆ ಮಾಡಿಕೊಂಡಿದ್ದಾರೆ.

ಮುಡಾ ಹಗರಣದಲ್ಲಿ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ ಹೈಕೋರ್ಟ್‌ ತೀರ್ಪನ್ನು ಪೊಲಿಟಿಕಲ್‌ ಜಡ್ಜ್‌ಮೆಂಟ್‌ ಎಂದು ಹೇಳುವ ಮೂಲಕ ಜಮೀರ್‌ ಅವರು ಭಾರೀ ಟೀಕೆಗೆ ಒಳಗಾಗಿದ್ದರು.

ವಿರೋಧ ಪಕ್ಷದವರು ಜಮೀರ್ ಹೇಳಿಕೆಗೆ ಆಕ್ರೋಶ ಹೊರಹಾಕಿದ್ದು, ಇದರ ಬೆನ್ನಲ್ಲೇ ಜಮೀರ್ ಸುದ್ದಿಗೋಷ್ಠಿಯಲ್ಲಿ ಸಮರ್ಥನೆ ನೀಡಿದ್ದಾರೆ.

ನಿನ್ನೆ  ಹೇಳಿಕೆ ನೀಡುವಾಗ ಒಂದು ಪದ ಬಳಸಿದೆ. ರಾಜಕೀಯ ಮಾಡುತ್ತಾರೆ ಅಂತ ಹೇಳುವ ಬದಲು ಪೊಲಿಟಿಕಲ್ ಜಡ್ಜ್ ಮೆಂಟ್ ಅಂತ ಹೇಳಿದ್ದೆ. ನಾನು ರಾಜಕೀಯ ಲಾಭ ಪಡೆಯುತ್ತಿದ್ದಾರೆ  ಅಂತ ಹೇಳೋಕೆ ಹೋಗಿದ್ದೆ. ನ್ಯಾಯಾಲಯದ ಬಗ್ಗೆ ನನಗೆ ಗೌರವ ಇದೆ. ತಪ್ಪಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.‌

ಇಂದು ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಜಮೀರ್‌ ಹೇಳಿಕೆಯ ಬಗ್ಗೆ ಜೋರು ಚರ್ಚೆ ನಡೆದಿದೆ. ಹಿರಿಯ ನಾಯಕರು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಜಮೀರ್‌ ಕ್ಷಮೆ ಕೇಳುವ ಮೂಲಕ ವಿಚಾರವನ್ನು ತಣ್ಣಗೆ ಮಾಡಲು ಮುಂದಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ