ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಗೇಟ್ ಪಾಸ್ ಕೊಡಲು ಅಮಿತ್ ಶಾ ಚಿಂತನೆ?!
ಮಂಗಳೂರಿನಲ್ಲಿ ಆರ್ ಎಸ್ಎಸ್ ಸಂಘನಿಕೇತನದಲ್ಲಿ ಅಮಿತ್ ಶಾ ಸಭೆ ನಡೆಸಿದ ಬಳಿಕ ಇಲ್ಲಿನ ಬಿಜೆಪಿ ನಾಯಕರೊಂದಿಗೂ ಸಭೆ ನಡೆಸಿದ್ದಾರೆ. ಸಂಘನಿಕೇತನದ ಸಭೆ ಬಳಿಕ ಪ್ರಧಾನಿ ಮೋದಿ ಜತೆಗೆ ಅಮಿತ್ ಶಾ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಹೀಗಾದರೆ ಬಿಎಸ್ ವೈಗೆ ಗೇಟ್ ಪಾಸ್ ಕೊಟ್ಟು ರಾಜ್ಯ ಬಿಜೆಪಿಗೆ ಹೊಸ ನಾಯಕನನ್ನು ನೇಮಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಆ ಮೂಲಕ ವಿಫಲದ ಸುಳಿಯಲ್ಲಿರುವ ರಾಜ್ಯ ಬಿಜೆಪಿಗೆ ಹೊಸ ಟಾನಿಕ್ ನೀಡಲು ಅಮಿತ್ ಶಾ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.