ಗೆಳತಿ ಆಟವಾಡಲು ಸೈಕಲ್ ನೀಡಿಲ್ಲವೆಂದು ಆತ್ಮಹತ್ಯೆಗೆ ಶರಣಾದ 11ರ ಬಾಲಕಿ

Sampriya

ಶುಕ್ರವಾರ, 25 ಏಪ್ರಿಲ್ 2025 (18:58 IST)
ಚಿತ್ರದುರ್ಗ: ಈಚೆಗೆ ಸಣ್ಣ ವಿಷಯಗಳಿಗೆ ಮಕ್ಕಳು ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.

ಇದೀಗ ಅಂತಹದ್ದೇ ಘಟನೆಯೊಂದು ಚಿತ್ರದುರ್ಗಾದಲ್ಲಿ ನಡೆದಿದೆ. ಆಟವಾಡುವಾಗ ಸ್ನೇಹಿತೆ ಸೈಕಲ್ ನೀಡಿಲ್ಲವೆಂದು ಪುಟ್ಟು ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ನಡೆದಿದೆ.

ಗೆಳತಿ ಆಟವಾಡಲು ಸೈಕಲ್ ನೀಡಿಲ್ಲವೆಂದು ಬೇಸರಗೊಂಡ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಹಿರಿಯೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗೋಪಾಲ ಮತ್ತು ರುದ್ರಮ್ಮ ದಂಪತಿ ಪುತ್ರಿ ಸ್ಪಂದನಾ (11) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಮನೆಯಲ್ಲಿ ರೂಂ ಬಾಗಿಲು ಹಾಕಿಕೊಂಡು ಸ್ಪಂದನಾ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಿರಿಯೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ