ಬಿಬಿಎಂಪಿ ಆರೋಗ್ಯಾಧಿಕಾರಿಯೊಬ್ಬರು ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಘಟನೆ

ಮಂಗಳವಾರ, 17 ಆಗಸ್ಟ್ 2021 (21:55 IST)
ಬಿಬಿಎಂಪಿ ಆರೋಗ್ಯಾಧಿಕಾರಿಯೊಬ್ಬರು ಖಾಸಗಿ ಗುತ್ತಿಗೆದಾರರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. 
ಕಾಟನ್‍ಪೇಟೆಯ 120ಸಿ ವಾರ್ಡ್‍ನ ತುಳಸಿ ತೋಟದ ಬಿಬಿಎಂಪಿಯ ಕಿರಿಯ ಆರೋಗ್ಯಾಧಿಕಾರಿ ಕೃಷ್ಣ  ಬಂಧಿತ. ಆರೋಪಿ ಸ್ವೀಕರಿಸುತ್ತಿದ್ದ 15 ಸಾವಿರ ರೂ. ಲಂಚದ ಹಣವನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 
ಕೆ.ಪಿ ಅಗ್ರಹಾರದ ಗುತ್ತಿಗೆದಾರರೊಬ್ಬರು 120ನೇ ವಾರ್ಡ್‍ನಲ್ಲಿ ಬಿಬಿಎಂಪಿಯ ಶೌಚಾಲಯ ಮತ್ತು ಮೂತ್ರಾಲಯಗಳನ್ನು ಟ್ಯಾಂಕರ್ ನೀರಿನ ಮೂಲಕ ಸ್ವಚ್ಛಗೊಳಿಸುವ ಟೆಂಡರ್ ಅನ್ನು ತನ್ನ ಸಹೋದರನ ಹೆಸರಿನಲ್ಲಿ ಪಡೆದುಕೊಂಡಿದ್ದರು. ಇದನ್ನು ಸ್ವಚ್ಛಗೊಳಿಸಿದ ಆರು ತಿಂಗಳ ಬಾಬ್ತು ಹಣವನ್ನು ಬಿಡುಗಡೆ ಮಾಡುವಂತೆ ಬಿಬಿಎಂಪಿಗೆ ಅರ್ಜಿ ಸಲ್ಲಿಸಿದ್ದರು. 
ಈ ಅರ್ಜಿಯೂ ಕಿರಿಯ ಆರೋಗ್ಯಾಧಿಕಾರಿ ಕಷ್ಣ ಅವರ ಪರಿಶೀಲನೆಯಲ್ಲಿತ್ತು. ಹೀಗಾಗಿ, ಅರ್ಜಿ ಪರಿಶೀಲಿಸುವಂತೆ ಗುತ್ತಿಗೆದಾರ ಕೃಷ್ಣ ಅವರನ್ನು ಭೇಟಿ ಮಾಡಿದಾಗ ಕಡತ ಪರಿಶೀಲಿಸಲು 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸರಗೊಂಡ ಗುತ್ತಿಗೆದಾರ ಎಸಿಬಿ ಪೆÇಲೀಸರಿಗೆ ಈ ಬಗ್ಗೆ ದೂರು ನೀಡಿದ್ದ. 
ಎಸಿಬಿ ಪೆÇಲೀಸರ ಪೂರ್ವ ನಿಶ್ಚಯದಂತೆ ಗುತ್ತಿಗೆದಾರ 15 ಸಾವಿರ ಹಣವನ್ನು ಆರೋಗ್ಯಾಧಿಕಾರಿ ಕೃಷ್ಣ ಅವರಿಗೆ ನೀಡಿದ್ದಾನೆ. ಹಣ ಪಡೆದುಕೊಳ್ಳುವಾಗ ಎಸಿಬಿ ಪೆÇಲೀಸರು ನೇರವಾಗಿ ಕೃಷ್ಣನನ್ನು ಬಂಧಿಸಿ, ಲಂಚದ ಹಣ ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ