ಔಷಧ ಖರೀದಿಸುವ ಜನರ ಬಗ್ಗೆ ಮಾಹಿತಿ ನೀಡದ ಹಿನ್ನಲೆ; ಮೆಡಿಕಲ್ ಶಾಪ್ ಲೈಸೆನ್ಸ್ ರದ್ದು
ಮಂಗಳವಾರ, 7 ಜುಲೈ 2020 (10:58 IST)
ಬೆಂಗಳೂರು : ಔಷಧ ಖರೀದಿಸಿದ ಜನರ ಮಾಹಿತಿ ನೀಡದ ಹಿನ್ನಲೆಯಲ್ಲಿ ಮೆಡಿಕಲ್ ಶಾಪ್ ಲೈಸೆನ್ಸ್ ರದ್ದು ಮಾಡಲಾಗಿದೆ.
ಕೊರೊನಾ ಹಿನ್ನಲೆಯಲ್ಲಿ ಮೆಡಿಕಲ್ ಗಳಲ್ಲಿ ಔಷಧ ಖರೀದಿಸುವ ಜನರ ಬಗ್ಗೆ ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆ ಸೂಚಿಸಿತ್ತು. ಆದರೆ ಫಾರ್ಮ್ ಪೋರ್ಟಲ್ ನಲ್ಲಿ ಔಷಧಿ ಬಗ್ಗೆ ಮಾಹಿತಿ ಭರ್ತಿ ಮಾಡದ ಕಾರಣ ನಿರ್ದಿಷ್ಟ ಅವಧಿಗೆ ರಾಜ್ಯದ 110 ಮೆಡಿಕಲ್ ಶಾಪ್ ಗಳ ಲೈಸೆನ್ಸ್ ರದ್ದು ಮಾಡಲಾಗಿದೆ.
ಬೆಂಗಳೂರು-03, ಬೀದರ್-4, ವಿಜಯಪುರ-15, ಮೈಸೂರು-4, ರಾಯಚೂರು-9, ಬಾಗಲಕೋಟೆ-5, ಕಲಬುರಗಿಯಲ್ಲಿ 70 ಮೆಡಿಕಲ್ ಶಾಪ್ ಲೈಸೆನ್ಸ್ ರದ್ದು ಮಾಡಲಾಗಿದೆ.