ಬೆಂಗಳೂರಿನ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಅಂದಾ ದರ್ಭಾರ್

ಬುಧವಾರ, 22 ಫೆಬ್ರವರಿ 2023 (16:14 IST)
ಕೆಲವೊಂದು ಖಾಸಗಿ ಶಾಲೆಗಳು ಶಿಕ್ಷಣದ ಹೆಸರಲ್ಲಿ ಹಗಲು ದರೋಡೆಗೆ ಇಳಿದಿದೆ.ಪ್ರೈವೇಟ್ ಎಜುಕೇಷನ್ಸ್ ಸೊಸೈಟಿಯಲ್ಲಿ ಒಂದು ವರ್ಷದ ಸ್ಕೂಲ್ ಫೀಸ್ ಕಟ್ಟೋವಷ್ಟರಲ್ಲಿ ಪೋಷಕರು ಹೈರಾಣಾಗ್ತಾರೆ.ಖಾಸಗಿ ಶಾಲೆಗಳ ವರ್ಷದ ಫೀಸ್ ಪೋಷಕರನ್ನು ಸುಸ್ತು ಹೊಡೆಸುತ್ತೆ.ಅಂಥದ್ರಲ್ಲಿ ಈಗ ಹತ್ತು ವರ್ಷದ ಅಡ್ವಾನ್ಸ್ ಫೀಸ್ ಕಟ್ ಬಿಟ್ರಪ್ಪ ಅಂತಾ ಆಫರ್ ಮಾಡಿದ್ದಾರೆ.
 
 ಬೆಂಗಳೂರಿನ ನಯಾ ಟ್ರೆಂಡ್ ಗೆ ಪೋಷಕರು ಸುಸ್ತು ಆಗಿದ್ದು,ಹತ್ತು ವರ್ಷದ ಫೀಸ್ ಕಟ್ಟೋಕೆ ಹೋಲ್ ಸೆಲ್ ಆಫರ್ ಕೊಟ್ಟಿದ್ದಾರೆ.25 ಲಕ್ಷ ರೂಪಾಯಿ ಹತ್ ವರ್ಷದ ಫೀಸ್ .ಲಕ್ಷ ಲಕ್ಷ ಫೀಸ್..! ಮಕ್ಕಳ ವಿದ್ಯಾಭ್ಯಾಸದ ಖರ್ಚಾಗಿದೆ. ಪೋಷಕರ ಜೇಬಿಗೆ ಸದಾ ಕತ್ತರಿ ಹಾಕಲು  ಶಿಕ್ಷಣ ಸಂಸ್ಥೆಗಳು ಮುಂದಾಗಿದೆ. ಬೆಂಗಳೂರಿನ  ಖಾಸಗಿ ಶಿಕ್ಷಣ ಸಂಸ್ಥೆ ಹೊರಡಿಸಿದ ಸುತ್ತೋಲೆಗೆ ಪೋಷಕರ ಸುಸ್ತಾಗಿದ್ದು,ಮುಂಗಡ ಶುಲ್ಕ ಯೋಜನೆ ಎಂಬ ಸುತ್ತೋಲೆಯನ್ನು ಪೋಷಕರಿಗೆ ಕಳುಹಿಸಲಾಗಿದೆ.
 
 ಸುತ್ತೋಲೆಯಲ್ಲಿ 10 ವರ್ಷದ ಫೀಸ್ ಅನ್ನು ಮುಂಗಡವಾಗಿ ಈ ಸ್ಕೂಲ್ ನಲ್ಲಿ ಕಟ್ಟಬಹುದು.ಇದು ಕಡ್ಡಾಯವಲ್ಲ.ಆದ್ರೇ ಇಷ್ಟವಿದ್ದ ಪೋಷಕರು ಇದನ್ನು ಕಟ್ಟಬಹುದು.ಹತ್ತು ವರ್ಷಕ್ಕೆ 25 ಲಕ್ಷ ಕಟ್ಟಿ ಅಡ್ವಾನ್ಸ್ ಫೀಸ್ ಕಟ್ಟಬಹುದು.1 ರಿಂದ 10ನೇ ಕ್ಲಾಸ್ ತನಕ ಅಡ್ವಾನ್ಸ್ ಅಡ್ಮಿಷನ್ ಮಾಡಿಸಬಹುದು  ಅಂತ ಸುತ್ತೋಲೆ ಇದೆ.ಒಂದೊಮ್ಮೆ ಹಣ  ಮುಂಗಡ ಪಾವತಿ ಮಾಡಿದ್ರೆ ಪ್ರತೀ ವರ್ಷ ಸಂಸ್ಥೆಯಿಂದ ಮಾಡುವ ಫೀಸ್ ಹೈಕ್ ಬಿಸಿ ತಟ್ಟಲ್ಲ ಅಂತೆಲ್ಲಾ  ಶಿಕ್ಷಣ ಸಂಸ್ಥೆ ಬೊಗಳೆ ಬಿಡುತ್ತಿದೆ.
 
ಉದಾಹರಣೆಗೆ ಒಂದು ಮಗುವಿಗೆ ವರ್ಷಕ್ಕೆ 2 ಲಕ್ಷ ಫೀಸ್ ಅಂದ್ರೆ 10 ವರ್ಷಕ್ಕೆ 20 ಲಕ್ಷದಲ್ಲಿ ಮಗುವಿನ ಶಿಕ್ಷಣ ಮುಗಿದು ಹೋಗುತ್ತೆ.ಈ ಆಫರ್ ಸ್ವೀಕಾರ ಮಾಡಿಲ್ಲ ಅಂದ್ರೆ ಒನ್ ಟು ಡಬಲ್ ಹಣ ಪಾವತಿ ಮಾಡಬೇಕಾಗುತ್ತದೆ ಅಂತ ಹೇಳಿ ಪೋಷಕರ ಸೆಳೆಯುವ ಯತ್ನ ಮಾಡ್ತಿದೆ.ಸದ್ಯ ಈ ವಿಚಾರಕ್ಕೆ ಸಂಬಂಧ ಪೋಷಕರ ಧ್ವನಿಯಾಗಿ ವಾಯ್ಸ್ ಆಫ್ ಪೇರೆಂಟ್ಸ್ ಅಸೋಸಿಯೇಶನ್ ಆಕ್ರೋಶ  ವ್ಯಕ್ತಪಡಿಸಿದೆ.10 ವರ್ಷ ಒಂದೇ ಶಾಲೆಯಲ್ಲಿ ಮಕ್ಕಳನ್ನು ಕಟ್ಟಿ ಹಾಕಿದ ಹಾಗೇ ಆಗುತ್ತೆ. ಶಿಕ್ಷಣದಲ್ಲಿ ವ್ಯಾಪಾರೀಕರಣ ಆದ್ರೆ ಮೌಲ್ಯಾಧಾರಿತ ಶಿಕ್ಷಣ ಹೇಗೆ ಕೊಡ್ತಾರೆ.ಸಂಸ್ಥೆ  ಮುಂಗಡ ದುಡ್ಡು ಕಟ್ಟಿದ್ರು, ಮಗು ಶಾಲೆ ಬಿಟ್ರೆ ದುಡ್ಡು ವಾಪಸ್ ಕೊಡ್ತಾರಾ ? ಅಂತಾ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ