ಮಂಡ್ಯ ಮೂಲದ ಕೌಸರ್ ಮುಬೀನಾ ಅವರನ್ನು ಹತ್ಯೆಗೈದ ಆರೋಪದಡಿ ಲಿವಿಂಗ್ ಟೂ ರಿಲೇಷನ್ ನಲ್ಲಿದ್ದ ನದೀಂ ಪಾಷ ಅವರನ್ನು ಬಂಧಿಸಲಾಗಿದೆ.ಕೌಸರ್ ಹಾಗೂ ನದೀಂಪಾಷ ಇಬ್ಬರಿಗೂ ಈ ಹಿಂದೆ ಪ್ರತ್ಯೇಕವಾಗಿದ್ದು ದಾಂಪತ್ಯದಿಂದ ದೂರವಾಗಿದ್ದರು. ದೂರದ ಸಂಬಂಧಿಕರಾಗಿದ್ದ ಕೌಸರ್ ನೊಂದಿಗೆ ನಾಲ್ಕು ವರ್ಷಗಳ ಹಿಂದೆ ಪರಿಚಯವಾಗಿ ಕಳೆದೊಂದು ವರ್ಷದಿಂದ ನದೀಂ ಜೊತೆಯಲ್ಲಿ ವಾಸವಾಗಿದ್ದ. ಅಶೋಕನಗರದ ನಂಜಪ್ಪ ಸರ್ಕಲ್ ನಲ್ಲಿ ಮನೆ ಮಾಡಿಕೊಂಡು ಒಟ್ಟಿಗೆ ವಾಸವಾಗಿದ್ದರು. ಕೆಲ ದಿನಗಳ ಹಿಂದೆ ಕೌಸರ್ ಬರ್ತ್ ಡೇ ಇದ್ದಿದ್ದರಿಂದ ಒಟ್ಟಿಗೆ ಹೊರಗೆ ಹೋಗಿ ಊಟ ಮಾಡುವ ಪ್ಲ್ಯಾನ್ ಮಾಡಿಕೊಂಡಿದ್ದರು. ಮೆಕ್ಯಾನಿಕ್ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಕೌಸರ್ ಗೆ ಬರ್ತ್ ಡೇ ಸಲುವಾಗಿ ಗಿಫ್ಟ್ ಕೊಟ್ಟು ವಿಶ್ ಮಾಡಿದ್ದ. ಬೆಳ್ಳಿ ಚೈನ್ ಗಿಫ್ಟ್ ಪಡೆದ ಕೌಸರ್, ಚಿನ್ನದ ಸರ ಕೊಡಬೇಕಿತ್ತು ಎಂದಿದ್ದಾಳೆ. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ವೈಮನಸ್ಸು ಮೂಡಿ ಗಲಾಟೆಗೆ ಕಾರಣವಾಗಿತ್ತು. ಕಳೆದ ಸೋಮವಾರ ಮನೆಗೆ ಬಂದಿದ್ದಾಗ ಇಬ್ಬರ ನಡುವೆ ಮತ್ತೆ ಗಲಾಟೆಯಾಗಿ ತಾರಕಕ್ಕೇರಿದೆ. ಕೋಪದಿಂದ ಮನೆಯಲ್ಲಿದ್ದ ಚಾಕು ಹಿಡಿದು ಆಕೆ ಕುತ್ತಿಗೆ ಸೀಳಿ ಕೊಲೆ ಮಾಡಿದ್ದ ಎಸ್ಕೇಪ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.