ಶಾಸಕ ಜಾರಕಿಹೊಳಿ ನೇತೃತ್ವ: ಸ್ಮಶಾನದಲ್ಲಿ ಮೌಡ್ಯವಿರೋಧಿ ಕಾರ್ಯಕ್ರಮ

ಶುಕ್ರವಾರ, 27 ಜುಲೈ 2018 (20:33 IST)
ಇವತ್ತು  ಖಗ್ರಾಸ ಚಂದ್ರ ಗ್ರಹಣ ಹಿನ್ನೆಲೆಬೆಳಗಾವಿಯಲ್ಲಿ ಮೌಢ್ಯ ವಿರೋಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತುಬೆಳಗಾವಿಯ ಸದಾಶಿವ ನಗರದಲ್ಲಿರುವ ಸ್ಮಶಾನದಲ್ಲಿ ಗ್ರಹನ ಹಿನ್ನೆಲೆಯಲ್ಲಿ  ಮಾನವ ಬಂಧುತ್ವ ವೇದಿಕೆಯ ವತಿಯಿಂದ ಮಾಜಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ವಿಶೇಷವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ   ಮಾತನಾಡಿದ ಶಾಸಕ ಜಾರಕಿಹೊಳಿ,  ಒಂದು ವಾರಗಳಿಂದ ಗ್ರಹಣದ ಬಗ್ಗೆ ಚರ್ಚೆ ನಡೆಯುತ್ತಿದೆಗ್ರಹಣ ಪರ, ವಿರೋಧ ಅನೇಕರು ವಾದ ಮಾಡುತ್ತಾರೆ. ಜನರನ್ನು ಮೌಢ್ಯದಿಂದ ಹೊರ ಬರಲು ಕಾರ್ಯಕ್ರಮ ಆಯೋಜನೆ ಮಾಡಿಲಾಗಿದೆ ಎಂದರು. ಇನ್ನು ಶಾಸ್ತ್ರದಂತೆ ಊಟ ಮಾಡುವಂತಿಲ್ಲ, ಕುಡಿಯುವ ನೀರನ್ನು ಚೆಲ್ಲುವಂತೆ ಹೇಳುತ್ತಾರೆ.

ವಿಜ್ಞಾನದಲ್ಲಿ ಗ್ರಹಣವೊಂದು ಸಹಜ ಕ್ರೀಯೆ ಎಂದು ಹೇಳುತ್ತಾರೆ. ನಮ್ಮ ದೇಶವನ್ನು ಅನೇಕ ವರ್ಷಗಳಿಂದ ಶಾಸ್ತ್ರ ಆಳುತ್ತಿದೆ‌. 10 ರೂಪಾಯಿ ಪಂಚಾಂಗ ನಮ್ಮನ್ನು ಆಳುತ್ತಿದೆ ಎಂದು ಹೇಳಿದರು. ಮಾನಸಿಕ ಗುಲಾಮಗಿರಿಯಿಂದ ಹೊರ ಬರಬೇಕು. ಡಾ.ಬಿ.ಆರ್. ಅಂಬೇಡ್ಕರ್ ರ ಸಾಮಾಜಿಕ ನ್ಯಾಯದ ರಥ ಮುಂದುವರೆಸಿದ್ದೇವೆ ಎಂದರು.

ರಾಜ್ಯ, ರಾಷ್ಟ್ರದ ಗಮನ ಸೆಳೆಯಲು ಸ್ಮಶಾನದಲ್ಲಿ ಮೌಢ್ಯ ವಿರೋಧಿ ಕಾರ್ಯಕ್ರಮ ಆಯೋಜಿಸಲಾಗಿದೆ. ಗ್ರಹಣ ಸಂದರ್ಭದಲ್ಲಿ  ದೇವಸ್ಥಾನ ಬೀಗ ವಿಚಾರವಾಗಿ ಮಾತನಾಡಿ, ಕಷ್ಟ ಕಾಲದಲ್ಲಿ ಕೈಹಿಡಿಯಬೇಕಿದ್ದ ದೇವರನ್ನು ಬೀಗ ಹಾಕಲಾಗಿದೆಇದು ಸಮಾಜದಲ್ಲಿ ಕೆಟ್ಟ ಪದ್ಧತಿ ಎಂದು ಹೇಳಿದರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ