ಬೀದಿಗೆ ಬಿದ್ದ ಮಾಜಿ ಶಾಸಕನ ಕುಟುಂಬ ಕಲಹ

ಶುಕ್ರವಾರ, 27 ಜುಲೈ 2018 (15:05 IST)
ಮಾಜಿ ಶಾಸಕರೊಬ್ಬರ ಕುಟುಂಬ ಕಲಹ ಬೀದಿಗೆ ಬಿದ್ದಿದೆ. ಕುಟುಂಬದ ಮಗನೇ ಮನೆ ಮುಂದೆ ಧರಣಿ ಕುಳಿತಿದ್ದಾನೆ. ಕಾರಣ ಏನು ಗೊತ್ತಾ?

ದಾವಣಗೆರೆ ಮಾಜಿ ಶಾಸಕ ಮೋತಿ ವೀರಪ್ಪ ಕುಟುಂಬದ ಕಲಹ ಬೀದಿಗೆ ಬಂದಿದೆ. ಆಸ್ತಿ ವಿಚಾರ ಹಿನ್ನಲೆ ಮಗ ಮನೆ ಮುಂದೆ ಧರಣಿ ಕೂತಿದ್ದಾನೆ. ದಾವಣಗೆರೆಯ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿರುವ ಮಾಜಿ ಶಾಸಕ ಮೋತಿ ವೀರಪ್ಪನ ಕೊನೆ ಪುತ್ರ ರುದ್ರಪ್ರಸಾದ್ ದಂಪತಿಯಿಂದ ಆರೋಪ ವ್ಯಕ್ತವಾಗಿದೆ. ಆಸ್ತಿ ನೀಡದೇ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ.

ಮನೆಗಾಗಿ ಸಹೋದರರ ನಡುವೆ ಆಸ್ತಿ ಕಲಹ ನಡೆದಿದ್ದುಮನೆಯಲ್ಲಿ ನೀರು, ವಿದ್ಯುತ್ ನೀಡದೆ ಕಿರುಕುಳ ನೀಡುತ್ತಿದ್ದಾರೆ. ಕೊಲೆ ಬೆದರಿಕೆ ಹಾಕುತ್ತಿರುವುದಾಗಿ ರುದ್ರಪ್ರಸಾದ್ ದಂಪತಿ ಆರೋಪ ಮಾಡ್ತಿದ್ದಾರೆಇನ್ನೂ ರಕ್ಷಣೆ ಕೋರಿ ಮನೆ ಮುಂದೆ ದಂಪತಿ ಮನೆ ಮುಂದೆ ಉಪವಾಸ ಧರಣಿ ಕೂತಿದ್ದಾರೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ