ಬೆಂಗಳೂರು: ಬೆಂಗಳೂರು ಇಂದಿನ ಸ್ಥಿತಿಗೆ ದಶಕಗಳಿಂದ ನಾಗರಿಕ ಮೂಲಸೌಕರ್ಯಗಳ ನಿರ್ಲಕ್ಷ್ಯವನ್ನು ಒಪ್ಪಿಕೊಂಡಿರುವ ನಿಮ್ಮ ಪ್ರಾಮಾಣಿಕತೆಯನ್ನು ನಾನು ಪ್ರಶಂಸಿಸುತ್ತೇನೆ ಎಂದು ಟ್ವೀಟ್ ಮಾಡಿದ ಸಂಸದ ತೇಜಸ್ವಿ ಸೂರ್ಯ ಅವರು, "ಕನಿಷ್ಠ ಈಗಲಾದರೂ ನಿಮ್ಮ ಸುರಂಗ ಮಾರ್ಗದ ಕಲ್ಪನೆಯನ್ನು ಬಿಟ್ಟು ಮೂಲಭೂತ ವಿಷಯಗಳತ್ತ ಗಮನ ಹರಿಸುತ್ತೀರಾ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಿರಂತರ ಮಳೆಯಿಂದಾಗಿ ಬೆಂಗಳೂರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಡಿಕೆ ಶಿವಕುಮಾರ್ ಅವರು ಪೋಸ್ಟ್ ಹಾಕಿ, ಬೆಂಗಳೂರಿನಲ್ಲಿ ನಿರಂತರ ಮಳೆಯಿಂದ ಉಂಟಾದ ಹಾನಿಯಿಂದ ನಾನು ತೀವ್ರ ಕಳವಳಗೊಂಡಿದ್ದೇನೆ... ನಾನು ಬೆಂಗಳೂರಿಗೆ ಬದ್ಧನಾಗಿರುತ್ತೇನೆ - ಸವಾಲುಗಳನ್ನು ಎದುರಿಸಲು ಮತ್ತು ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಹಗಲಿರುಳು ಶ್ರಮಿಸುತ್ತಿದ್ದೇನೆ. ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಹೇಳಿದ್ದರು. ಅದಲ್ಲದೆ ಈ ಸಮಸ್ಯೆ ಇಂದಿನದಲ್ಲ ಎಂದು ಹೇಳಿದ್ದರು.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿ ಪೋಸ್ಟ್ ಹಾಕಿದ ತೇಜಸ್ವಿ ಸೂರ್ಯ ಅವರು, ಸರ್ಕಾರದ ಪ್ರತಿಕ್ರಿಯೆಯನ್ನು ಶೀಘ್ರವಾಗಿ ಟೀಕಿಸಿದ್ದಾರೆ.
ಡಿಕೆ ಶಿವಕುಮಾರ್ ಅಧಿಕಾರ ವಹಿಸಿಕೊಂಡ ನಂತರ ಸರ್ಕಾರದ ಪ್ರಗತಿಯನ್ನು ಪ್ರಶ್ನಿಸಿದ ಸಂಸದರು, "ಸಾರ್ ನೀವು ಅಧಿಕಾರ ವಹಿಸಿಕೊಂಡು ಎರಡು ವರ್ಷಗಳು ಕಳೆದಿವೆ, ನಾವು ನಿಜವಾದ, ವೇಗದ ಪ್ರಗತಿಯನ್ನು ಕಾಣಲು ಬಯಸುತ್ತೇವೆ, ಮನ್ನಿಸುವಿಕೆಯಲ್ಲ. ಟೀಕೆಗಳ ನಡುವೆಯೂ, ಡಿಕೆ ಶಿವಕುಮಾರ್ ಅವರು ಸಾರ್ವಜನಿಕರಿಗೆ ಭರವಸೆ ನೀಡಿದರು" ಎಂದು ಅವರು ಟ್ವೀಟ್ ಮಾಡಿದ್ದಾರೆ.