ಮಂತ್ರಾಲಯದಲ್ಲಿ ಗುರು ಸಾರ್ವಭೌಮರ ಆರಾಧನೆ

ಸೋಮವಾರ, 27 ಆಗಸ್ಟ್ 2018 (17:40 IST)
ಶ್ರೀ ಮಂತ್ರಾಲಯದ   ಗುರು ಸಾರ್ವಭೌಮ  ಶ್ರೀ ರಾಘವೇಂದ್ರ ಸ್ವಾಮಿಗಳ 347 ನೇ ಆರಾಧನೆ ಮಹೋತ್ಸವ
ಪ್ರಾರಂಭವಾಗಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಪೂಜೆ ಪುನಸ್ಕಾರಗಳೂಂದಿಗೆ ಮಠದಲ್ಲಿ ಪೂರ್ವಾರಾಧನೆ, ರಾಯರ  ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಹೂ ಅಲಂಕಾರ ಮಾಡಲಾಗಿದೆ.

ಗುರು ರಾಘವೇಂದ್ರ ರ ಪಲಕ್ಕಿ ಉತ್ಸವ ಸಡಗರ ಮನೆ ಮಾಡಿದೆ. ಭಾಜಾ ವಾದ್ಯಗಳಿಂದ ಬೃಂದಾವನದಲ್ಲಿ ಪಲಕ್ಕಿ ಉತ್ಸವ ನಡೆಯುತ್ತಿದೆ. ಇಡೀ ಬೃಂದಾವನ ವಿವಿಧ ಬಗೆಯ ಪುಷ್ಪಗಳ ಅಲಂಕಾರದಿಂದ ಕಂಗೊಳಿಸುತ್ತಿದೆ. ಭಕ್ತ ಸಾಗರ ರಾಯರ ಪಾದಕ್ಕೆ ಮನಸೋತು ಭಕ್ತಿಯಿಂದ ಮೊರೆಹೋಗಿ ಇಷ್ಟಾರ್ಥ ಸಿದ್ಧಿಗಾಗಿ ಮೊರೆ ಹೋಗಿದೆ. ಗುರು ರಾಯರ‌ ದರ್ಶನ  ವೀಕ್ಷಿಸಲು ತುಂಗಾ ನೀರಿನಂತೆ ಭಕ್ತರು ಆಗಮಿಸುತ್ತಿದ್ದಾರೆ. ಕಾಮಧೇನು ಕರುಣಾಳುವಿನ  ಬೃಂದಾವನ ಭಕ್ತರ ಕೈಲಾಸವಾಗಿದೆ.

ಶ್ರೀ ರಾಘವೇಂದ್ರ ವಿಜಯ, ಶ್ರೀ ಜಗನ್ನಾಥ ದಾಸರ ದೃಷ್ಟಿಯಲ್ಲಿ ಶ್ರೀಗುರುರಾಜರು ವಿಷಯ ಕುರಿತು ಪ್ರವಚನ ನಡೆಯಿತು. ಆದೋನಿಯ ವಿದ್ವಾನ್ ಸುಸ್ವರಂ ನಾಗರಾಜಾಚಾರ್ಯ ಹಾಗೂ ಮಂತ್ರಾಲಯದ ವಿದ್ವಾನ್ ಭೀಮಸೇನಾಚಾರ್ಯ ಅವರಿಂದ ಪ್ರವಚನ ಕಾರ್ಯಕ್ರಮ ನಡೆಯಿತು. ರಾತ್ರಿ  ಉತ್ಸವ ಮೂರ್ತಿಯ ಸಿಂಹವಾಹ ಸೇವೆ  ಪಲ್ಲಕ್ಕಿ ಉತ್ಸವ ನಡೆಯಿತು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ