ಕೇಂದ್ರ ಬರ ಅಧ್ಯಯನ ತಂಡಕ್ಕೆ ಬೆವರಿಳಿಸಿದವರಾರು?

ಗುರುವಾರ, 28 ಫೆಬ್ರವರಿ 2019 (20:10 IST)
ಕೇಂದ್ರ ಬರ ಅಧ್ಯಯನ ತಂಡ ರಾಜ್ಯದ ವಿವಿಧೆಡೆ ಬೆಳೆ ಹಾನಿ, ಮೇವು ಬ್ಯಾಂಕ್, ಕೆರೆಗಳಿಗೆ ಭೇಟಿ ನೀಡುತ್ತಿದೆ. ಏತನ್ಮಧ್ಯೆ ಉನ್ನತ ಅಧಿಕಾರಿಗಳಿರುವ ತಂಡಕ್ಕೆ ರೈತರು ಬೆವರಿಸಿದ್ದಾರೆ.

ಕೇಂದ್ರ ಬರ ತಂಡದಿಂದ ವಿಜಯಪುರ ಜಿಲ್ಲೆಯಲ್ಲಿ ಬರ ಪರೀಶಿಲನೆ ನಡೆಸಲಾಯಿತು. ಇಂಡಿ ತಾಲೂಕಿನ ಅಥರ್ಗಾಗೆ ಭೇಟಿ ನೀಡಿ ಕೃಷಿ ಬೆಳೆ ಹಾನಿ ಕುರಿತು ಪರಿಶೀಲನೆಯನ್ನು ಅಧಿಕಾರಿಗಳು ನಡೆಸಿದರು.

ರಾಜನಾಳದಲ್ಲಿ ಸಣ್ಣ ನೀರಾವರಿ ಕೆರೆಗೆ ಭೇಟಿ ನೀಡಿ, ತಡವಲಗಾದಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿ ವಿಕ್ಷಿಸಿದರು.
ಕಳೆದ ನಾಲ್ಕೈದು ವರ್ಷಗಳಿಂದ ಮಳೆಯಾಗದ ಹಿನ್ನಲೆಯಲ್ಲಿ ಪ್ರತಿ ವರ್ಷವೂ ಅಧಿಕಾರಿಗಳು ಭೇಟಿ ನೀಡಿ ಹೋಗುತ್ತಾರೆ. ಆದರೆ ಪರಿಹಾರ ಮಾತ್ರ ನಮಗೆ ಬರುತ್ತಿಲ್ಲ ಎಂದು ಅನ್ನದಾತರು ಆರೋಪ ಮಾಡಿದರು.

ಭಾರತ ಸರ್ಕಾರದ ಜಲಸಂಪನ್ಮೂಲ ಸಚಿವಾಲಯದ ಹಿರಿಯ ಜಂಟಿ ಆಯುಕ್ತ ಎಸ್.ಕೆ.ಕಂಬೋಜ್ ನೇತೃತ್ವದ ತಂಡದಲ್ಲಿ ಸದಸ್ಯರಾದ ಕೇಂದ್ರ ಪಶು ಸಂಗೋಪನೆ ಮೀನುಗಾರಿಕೆ ಇಲಾಖೆಯ ಎಫ್‍ಆರ್‍ಐಓ ತರುಣಕುಮಾರ ಸಿಂಗ್, ಭಾರತ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಡಿ.ಜಿ.ಎಂ. ಸತ್ಯಕುಮಾರ ಇದ್ದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ