ಚಿನ್ನದ ಮಳಿಗೆ ದಾಳಿ‌ ಮಾಡಿದ್ದ ನಕಲಿ‌ ಬಿ ಐ ಎಸ್ ಅಧಿಕಾರಿಗಳ ಬಂಧನ

geetha

ಸೋಮವಾರ, 29 ಜನವರಿ 2024 (18:46 IST)
ಬೆಂಗಳೂರು-ಕೆ.ಆರ್ ಪುರಂನ  ಮಹಾಲಕ್ಷ್ಮೀ ಚಿನ್ನದ ಮಳಿಗೆ ಮೇಲೆ ೨೭ ರಂದು  ನಕಲಿ ಬಿ ಐಎಸ್  ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಸಿನಿಮಿಯಾ ಮಾದರಿಯಲ್ಲಿ ನಾಲ್ಕು ಜನರ ಟೀಂನಿಂದ ದಾಳಿ ನಡೆದಿದೆ.ದಾಳಿ ವೇಳೆ ೧ ಕೆಜಿಗೂ ಅಧಿಕ ಚಿನ್ನ ತೆಗೆದುಕೊಂಡ ಹೋಗಲು ಖದೀಮರು ಮುಂದಾಗಿದ್ದಾರೆ.ಹೊರ ರಾಜ್ಯದ ಗ್ಯಾಂಗ್ ನಿಂದ ಇನೋವ್ ಕಾರ್ ನಲ್ಲಿ  ನಾಲ್ವರು ಎಂಟ್ರಿ ಕೊಟ್ಟಿದ್ದಾರೆ.ಇಡೀ ಬೆಂಗಳೂರಿನ ಹಲವು ಜ್ಯುವೆಲರ್ಸ್ ಮೇಲೆ ದಾಳಿ ಆಗಿವೆ ಅದರಲ್ಲಿ‌ ನಿಮ್ಮದೂ ಒಂದು ಎಂದು ಗ್ಯಾಂಗ್ ಹೇಳಿದೆ.
 
ಪಕ್ಕ ಅಧಿಕಾರಿಗಳಂತೆ ಬಂದು ಹಾಲ್ ಮಾರ್ಕ್ ಇಲ್ಲರ ಅಕ್ರಮ ಚಿನ್ನದ ವ್ಯವಹಾರ ಮಾಡುತಿರೋದಾಗಿ ಮಾಹಿತಿ ಹೇಳಿ ೪೦ ನಿಮಿಷಗಳ ಸರ್ಚಿಂಗ್ ಮಾಡಿದ್ದಾರೆ.ಬಳಿಕ ಅಂಗಡಿಯಲ್ಲಿದ್ದ ೧ ಕೆಜಿಗೂ ಅಧಿಕ ಚಿನ್ನ  ನಕಲಿ ಅಧಿಕಾರಿಗಳು ತೆಗೆದಿದ್ದಾರೆ.ಇವೆಲ್ಲವನ್ನೂ ಸೀಜ್ ಮಾಡುವುದಾಗಿ ನಕಲಿ ಅಧಿಕಾರಿಗಳು ಕೈಗೆ ನಕಲಿ ನೋಟಿಸ್ ಸಹ ನೀಡಿದ್ದಾರೆ.ಮುಂದಿನ ವಾರ ತಮಿಳುನಾಡಿನ ಕಚೇರಿಗೆ ಬರುವಂತೆ ಹೇಳಿ ನಿರ್ಗಮಿಸಿದ್ದಾರೆ.ನರ್ಗಮನದ ವೇಳೆ ನಕಲಿ ಅಧಿಕಾರಿಗಳ ಎಡವಟ್ಟು ಮಾಡಿದ್ದಾರೆ.

ಜ್ಯುವೆಲರ್ಸ್ ನ ಸಿಸಿಟಿವಿ ಡಿವಿಆರ್ ಅಧಿಕಾರಿಗಳು ತೆಗೆದುಕೊಂಡಿದ್ದಾರೆ.ಇದನ್ನು ಕಂಡು ಅನುಮಾನಗೊಂಡ ಜ್ಯುವೆಲರ್ಸ್ ನ ಕೆಲ ಸಿಬ್ಬಂದಿಗಳು ದಾಳಿ ಮುಗಿಸಿ ಇನೊವಾದಲ್ಲಿ ಹೊರಟವರನ್ನು ಫಾಲೋ ಮಾಡಿದ್ದಾರೆ.ಸಿಬ್ಬಂದಿಗಳಿಂದ ತಪ್ಪಿಸಿಕೊಳ್ಳುವ ಬರದಲ್ಲಿ  ಸರಣಿ ಅಪಘಾತ ನಡೆದಿದೆ.ಟ್ರಾಫಿಕ್ ನಡುವೆ ಫಾಲೋ ಮಾಡಿದನ್ನು ಕಂಡು ರೂಟ್ ಚೇಂಜ್ ಮಾಡಿದ್ದಾರೆ.ಟಿಸಿ ಪಾಳ್ಯದ ಕಡೆ ಹೊರಟ ಗ್ಯಾಂಗ್ ನಿಂದ ಬೈಕ್ ಗಳ ಮೇಲೆ ಸರಣಿ ಅಪಘಾತವಾಗಿದೆ.
 
ಇದೆಲ್ಲದರ ನಡುವೆ ಕೆಆರ್ ಪುರಂ ಪೊಲೀಸರಿಗೆ ಕೃತ್ಯದ ದೂರು ನೀಡಲಾಗಿದೆ.ದೂರು ದಾಖಲಾಗುತಿದ್ದಂತೆ ಕೂಡಲೇ ಅಲರ್ಟ್ ಆದ ಇನ್ಸ್ ಪೆಕ್ಟರ್ ನಿಂದ ಕಾರ್ಯಾಚರಣೆ ನಡೆಸಲಾಗಿದೆ.ಮೂರು ಸಬ್ ಇನ್ಸ್ ಪೆಕ್ಟರ್ ಗಳು ಟಿಸಿ ಪಾಳ್ಯಕ್ಕೆ ಎಂಟ್ರಿ ಕೊಟ್ಟು ಎಸ್ಕೇಪ್ ಆಗುತಿದ್ದಂತೆ ಕೊಂಚ ದೂರದಲ್ಲೇ ನಕಲಿ ಅಧಿಕಾರಿಗಳ ಬಂಧನ ಮಾಡಿದ್ದಾರೆ.ಸಂಪತ್ ಕುಮಾರ್, ಜೊಶಿ ಥಾಮಸ್, ಅವಿನಾಶ್, ಸಂದೀಪ್ ಬಂಧಿತಕ ನಕಲಿ ಅಧಿಕಾರಿಗಳಾಗಿದ್ದು,ಸಂಪತ್ ಈ ಹಿಂದೆ ಮಂಡ್ಯದಲ್ಲಿ  ಕಳ್ಳತನ ಕೃತ್ಯ ಎಸಗಿದ್ದ.

ಈ ಸಂಬಂಧ ಜೈಲು ವಾಸ ಸಹ ಅನುಭವಿಸಿ ಬಿಡುಗಡೆಯಾಗಿದ್ದ ಅದಾದ ಬಳಿಕ ತಮಿಳುನಾಡು ಮೂಲದ ಅದೊಬ್ಬ ವ್ಯಕ್ತಿಯ ಸಹವಾಸಮಾಡಿದ್ದ.ಆತನ ನಿರ್ದೇಶನದಂತೆ ಸಿಂಡಿಕೇಟ್ ಗ್ಯಾಂಗ್ ನಿಂದ ಕೃತ್ಯ ನಡೆಸಲಾಗಿದೆ.ಪೊಲೀಸರ ಕಾರ್ಯಾಚರಣೆ ವೇಳೆ ತಮಿಳುನಾಡು ಮೂಲದ ಆ ಮಾಸ್ಟರ್ ಮೈಂಡ್ ನಾಪತ್ತೆಯಾಗಿದ್ದು,ಕೆಆರ್ ಪುರಂ ಪೊಲೀಸರಿಂದ  ತಾಲಾಶ್ ಮುಂದುವರೆದಿದೆ.ಕಳ್ಳತನವಾಗಿದ್ದ ಸಂಪೂರ್ಣ ಚಿನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ