ಹಿಟ್ & ರನ್ ಮಾಡಿದ್ದವ ಅರೆಸ್ಟ್
ಹುಬ್ಬಳ್ಳಿ ಹೊರವಲಯದ ವರೂರು ಬಳಿ ಹಿಟ್ & ರನ್ ಪ್ರಕರಣ ಸಂಬಂಧ ತಮಿಳುನಾಡು ಶಾಸಕನ ಡ್ರೈವರ್ನ್ನ ಬಂಧಿಸಲಾಗಿದೆ. ತಮಿಳುನಾಡು ಶಾಸಕನಿದ್ದ ಕಾರಿನಿಂದ ಅಪಘಾತ ನಡೆದು ಓರ್ವ ಸಾವನ್ನಪ್ಪಿದ್ದ.. ಗ್ರಾಮೀಣ ಪೊಲೀಸರು ಚಾಣಾಕ್ಷ ತನದಿಂದ ಕಾರು ಹಾಗೂ ಚಾಲಕನನ್ನು ಪತ್ತೆ ಹಚ್ಚಿದ್ದಾರೆ. ತಮಿಳುನಾಡು ಶಾಸಕ ವೇಲು ಪ್ರಯಾಣಿಸುತ್ತಿದ್ದ ಕಾರು ಆ್ಯಕ್ಸಿಡೆಂಟ್ ಮಾಡಿ ಎಸ್ಕೇಪ್ ಆಗಿದ್ದ. ಮುರಿದ ನಂಬರ್ ಪ್ಲೇಟ್, ಫ್ಲ್ಯಾಗ್ನಿಂದ ಕಾರು ಪತ್ತೆ ಮಾಡಿದ್ದು, ಆಕ್ಸಿಡೆಂಟ್ ತಾನೇ ಮಾಡಿರುವುದಾಗಿ ಬಂಧಿತ ಡ್ರೈವರ್ ಒಪ್ಪಿಕೊಂಡಿದ್ದಾನೆ. ಆರೋಪಿ ದಾವಣಗೆರೆಯ ಮೂಲದ ಆಕಾಶ್ ಎನ್ನಲಾಗಿದೆ..ಸದ್ಯ ಆರೋಪಿಯನ್ನ ಪೊಲೀಸರು ಬಂಧಿಸಿ ಕಾರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.