ಹಾವು ಹಿಡಿಯಲು ಹೋದವನಿಗೆ ಕಚ್ಚಿದ ಹಾವು
ಹಾವು ಹಿಡಿಯಲು ಹೋದ ಯುವಕನಿಗೆ ಹಾವು ಕಚ್ಚಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಸಾಗರ ತಾಲೂಕಿನ ಶ್ರೀಧರ ನಗರದಲ್ಲಿ ದಿಲ್ ಶಾದ್ ರೊನಾಲ್ಡ್ ಹಾವನ್ನ ಹಿಡಿಯಲು ಹೋದಾಗ ಹಾವು ಕಚ್ಚಿದೆ..ಕೂಡಲೇ ಹಾವು ಕಚ್ಚಿದ ಜಾಗವನ್ನ ಯುವಕ ಬ್ಲೇಡ್ನಿಂದ ಕೊಯ್ದುಕೊಂಡಿದ್ದಾನೆ..ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಚಿಕಿತ್ಸೆ ನೀಡಿದ್ದು, ಯಾವುದೇ ಪ್ರಾಣಾಪಾಯ ಇಲ್ಲವೆಂದು ತಿಳಿಸಿದ್ದಾರೆ.