ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಬಾಂಗ್ಲಾದೇಶದ ವಲಸಿಗ ಮಹಿಳೆಯರು ಅರೆಸ್ಟ್

ಸೋಮವಾರ, 11 ನವೆಂಬರ್ 2019 (10:05 IST)
ಕೋಲಾರ : ಅಕ್ರಮವಾಗಿ ವಾಸವಾಗಿದ್ದಲ್ಲದೇ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಬಾಂಗ್ಲಾದೇಶದ ವಲಸಿಗ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.



ಶಿಲ್ಪಿ ಅಕ್ತಾರ್ ಪಾಕಿಯಾ ಹಾಗೂ ರುಬೀಯಾ ಬಂಧಿತ ಆರೋಪಿ ಮಹಿಳೆಯರು. ಇವರಿಬ್ಬರು ಬಂಗಾರಪೇಟೆಯ ದೇಶಿಹಳ್ಳಿಯಲ್ಲಿ ಒಂದು ವರ್ಷದಿಂದ ಅಕ್ರಮವಾಗಿ ವಾಸವಾಗಿದ್ದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು.


ಈ ಬಗ್ಗೆ ಮಾಹಿತಿ ತಿಳಿದ ಬಂಗಾರಪೇಟೆ ಪೊಲೀಸರು ಮಹಿಳೆಯರ ಮನೆ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ