ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಬಿಹಾರದಿಂದ ಹೊಸ ಅತಿಥಿಗಳ ಆಗಮನ

Sampriya

ಶನಿವಾರ, 19 ಅಕ್ಟೋಬರ್ 2024 (14:46 IST)
Photo Courtesy X
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೊಸ ಅತಿಥಿಗಳ ಬಂದಿದ್ದಾರೆ. ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಬಿಹಾರದ ಪಟ್ನಾ ಮೃಗಾಲಯದಿಂದ ಎರಡು ಮೊಸಳೆ, ಒಂದು ಬಿಳಿ ಹುಲಿ ಹಾಗೂ ಒಂದು ಕಾಡು ಬೆಕ್ಕನ್ನು ಉದ್ಯಾನಕ್ಕೆ ತರಲಾಗಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಒಂದು ಜೀಬ್ರಾ ಮತ್ತು ಎರಡು ಗಂಡು ತಮಿನ್‌ ಜಿಂಕೆಗಳನ್ನು ಪಟ್ನಾ ಮೃಗಾಲಯಕ್ಕೆ ಕಳುಹಿಸಲಾಗಿದೆ. ಹೊಸ ಅತಿಥಿಗಳನ್ನು 45 ದಿನ ಕ್ವಾರೆಂಟೈನ್‌ನಲ್ಲಿಟ್ಟು ನಂತರ ವೀಕ್ಷಣೆಗೆ ಬಿಡಲಾಗುತ್ತದೆ ಎಂದು ಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ತಿಳಿಸಿದ್ದಾರೆ.

ಉದ್ಯಾನದಲ್ಲಿ ನಾಲ್ಕು ಘರಿಯಲ್‌ ಮೊಸಳೆಗಳಿದ್ದು, ಅವುಗಳಿಗೆ ವಯಸ್ಸಾಗಿವೆ. ಸಂತಾನೋತ್ಪತ್ತಿಗಾಗಿ ಎರಡು ಗಂಡು ಮತ್ತು ಒಂದು ಹೆಣ್ಣು ಘರಿಯಲ್‌ ಮೊಸಳೆ ತರಲಾಗಿದೆ.

ಉದ್ಯಾನದಲ್ಲಿ ಝಾನ್ಸಿ ಮತ್ತು ವೀರ್‌ ಎಂಬ ಎರಡು ಬಿಳಿ ಹುಲಿಗಳಿದ್ದವು. ಈಗ ಪಟ್ನಾದ ಅತಿಥಿ ಆಗಮನದಿಂದಾಗಿ ಬಿಳಿ ಹುಲಿಗಳ ಸಂಖ್ಯೆ ಮೂರಕ್ಕೇರಿದೆ. ಹೆಣ್ಣು ಕಾಡು ಬೆಕ್ಕನ್ನೂ ಕೂಡ ಉದ್ಯಾನವನಕ್ಕೆ ಕರೆತರಲಾಗಿದೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ