ಮಂತ್ರಿ ಆಗಿ ಕೋರ್ಟ್​ಗೂ ಗೌರವ ಕೊಡಬೇಕು

ಸೋಮವಾರ, 25 ಸೆಪ್ಟಂಬರ್ 2023 (18:20 IST)
ಕಾವೇರಿ ನೀರು ಬಿಡುಗಡೆ ನಿಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಿನ್ನೆ ಮೊನ್ನೆ ಮಳೆ ಚೆನ್ನಾಗಿದೆ. ಮೋಡ ಬಿತ್ತನೆ ಬಗ್ಗೆ ಚರ್ಚಿಸಿದ್ದೇವೆ. ಕಾನೂನಾತ್ಮಕ ಹೋರಾಟ ವಿಚಾರವಾಗಿ ನಾನು ಒಬ್ಬ ಮಂತ್ರಿ ಆಗಿ ಏನು ಮಾತಾಡಕ್ಕೆ ಆಗ್ತಾ ಇಲ್ಲ. ಮಂತ್ರಿ ಆಗಿ ಕೋರ್ಟ್​ಗೂ ಗೌರವ ಕೊಡಬೇಕು. ಜನರನ್ನು ಉಳಿಸಿಕೊಳ್ಳಬೇಕು, ಏನೇ ಆಗಲಿ ರಾಜ್ಯದ ಹಿತ ಕಾಪಾಡಲೇಬೇಕು. ಜನರಿಗೆ ತೊಂದರೆ ಆಗಬಾರದು. ಅವರಾವರ ಚರ್ಚೆಯಲ್ಲಿ ನಾವು ಇಂಟರಫಿಯರ್ ಆಗಲ್ಲ.. ಕೋರ್ಟ್​ ವಿಚಾರ ಅವರಿಗೆಲ್ಲರಿಗೂ ಗೊತ್ತಿದೆ.. ಎಂದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ