ರ್ಯಾಪಿಡೋ ಚಾಲಕನ ಮೇಲೆ ಆಟೋ ಚಾಲಕನ ದೌರ್ಜನ್ಯ

ಗುರುವಾರ, 9 ಮಾರ್ಚ್ 2023 (14:11 IST)
ಆಟೋ ಸ್ಟಾಂಡ್ ಗೆ ಬಂದು ಮಹಿಳೆಯನ್ನ ಪಿಕ್ ಮಾಡಿದ್ದಕ್ಕೆ ಆಟೋ ಚಾಲಕ ವಿಕೃತ ವರ್ತನೆ ಮೆರೆದಿದ್ದಾನೆ.ಬೇರೆ ದೇಶದಿಂದ ಬಂದ ಯುವಕ ಎಂದು ಆತನ ವಿಡಿಯೋ ಮಾಡಿ, ಆತನ ಹೆಲ್ಮೆಟ್ ಪುಡಿ ಪುಡಿ ಮಾಡಿ ಆಟೋ ಚಾಲಕ ಅಟ್ಟಹಾಸ ಮೆರೆದಿದ್ದಾನೆ.ಅಷ್ಟೇ ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಅಮಾಯಕ ಯುವಕನ ವಿಡಿಯೋ ಅಪ್ ಲೋಡ್ ಮಾಡಿದಾನೆ.ಸದ್ಯ ಆಟೋ ಚಾಲಕನಿಗೆ ಸಾಮಜಿಕ‌ಜಾಲತಾಣದಲ್ಲಿ ನೆಟ್ಟಿಗರಿಂದ ಪುಲ್ ಕ್ಲಾಸ್ ತೆಗೆದುಕೊಳ್ಳಲಾಗಿದೆ.ಅಮಾಯಕನಿಗೆ ನಿಂದಿಸಿದ್ದಕ್ಕೆ ಸಾರ್ವಜನಿಕರು ಫುಲ್ ಗರಂ ಆಗಿದ್ದು,ಈತನ ವಿರುದ್ಧ ಬೆಂಗಳೂರು ಪೊಲೀಸ್ರ ಕ್ರಮಕೈಗೊಳ್ಳಿ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.ತನ್ನಷ್ಟಕ್ಕೆ ತಾನು ದುಡಿದು ತಿನ್ನೋನಾ ಮೇಲೆ ಇದೆಂಥಾ ದರ್ಪ ಎಂದು ಜನರು ಪ್ರಶ್ನೆ ಮಾಡ್ತಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ