ಕರ್ನಾಟಕ ಪೊಲೀಸರು ಬಂದಾಗ ಅತುಲ್ ಸುಭಾಷ್ ಪತ್ನಿ ಮನೆಯವರು ನಾಪತ್ತೆ

Krishnaveni K

ಶನಿವಾರ, 14 ಡಿಸೆಂಬರ್ 2024 (10:12 IST)
ಲಕ್ನೋ: ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಟೆಕಿ ಅತುಲ್ ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯಾ ವಿರುದ್ಧ ಪ್ರಕರಣ ದಾಖಲಾಗಿದ್ದು, ಆಕೆಯನ್ನು ವಿಚಾರಣೆಗೊಳಪಡಿಸಲು ಕರ್ನಾಟಕ ಪೊಲೀಸರು ಉತ್ತರ ಪ್ರದೇಶದ ಆಕೆಯ ಮನೆಗೆ ಹೋದರೆ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಮೊನ್ನೆಯೇ ಮಾಧ್ಯಮಗಳು ನಿಖಿತಾ ಮನೆಯತ್ತ ತೆರಳಿದಾಗ ಬಾಯಿಗೆ ಬಂದಂತೆ ಬೈದಿದ್ದ ಮನೆಯವರು ಬೈಕ್ ಏರಿ ಪರಾರಿಯಾಗಿದ್ದರು. ಇದೀಗ ಬೆಂಗಳೂರಿನಲ್ಲಿ ನಿಖಿತಾ ವಿರುದ್ಧ ಪತಿಯ ಸಾವಿಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸರು ವಿಚಾರಣೆಗೆಂದು ಉತ್ತರ ಪ್ರದೇಶದ ಆಕೆಯ ಮನೆಗೆ ತೆರಳಿದ್ದಾರೆ.

ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಹೋದಾಗ ನಿಖಿತಾ ಆಗಲೀ ಆಕೆಯ ಕುಟುಂಬಸ್ಥರಾಗಲೀ ಸ್ಥಳದಲ್ಲಿರಲಿಲ್ಲ. ಮನೆಗೆ ಬೀಗ ಹಾಕಿ ಕುಟುಂಬ ಸಮೇತ ನಾಪತ್ತೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಮನೆಯ ಬಾಗಿಲಿಗೆ ಎಲ್ಲೇ ಇದ್ದರೂ ತಕ್ಷಣವೇ ಬೆಂಗಳೂರಿನ ಠಾಣೆಗೆ ಬಂದು ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್ ಅಂಟಿಸಿ ತೆರಳಿದ್ದಾರೆ.

ನಿಖಿತಾ ಮತ್ತು ಕುಟುಂಬಸ್ಥರು ಅತುಲ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಸೇರಿದಂತೆ ಹಲವು ಕೇಸ್ ದಾಖಲಿಸಿ ಮಾನಸಿಕವಾಗಿ ಹಿಂಸೆ ನೀಡಿದ್ದರು. ಆ ಕಾರಣಕ್ಕೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಅತುಲ್ ಸುಭಾಷ್ ಡೆತ್ ನೋಟ್ ಬರೆದಿದ್ದ. ಈ ಘಟನೆ ರಾಷ್ಟ್ರದಾದ್ಯಂತ ಸುದ್ದಿ ಮಾಡಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ