ಅತ್ತೆ – ಮಾವನ ಕಿರುಕಳಕ್ಕೆ ಬೇಸತ್ತ ಗೃಹಿಣಿ ಹೀಗೆ ಮಾಡೋದಾ?

ಸೋಮವಾರ, 4 ನವೆಂಬರ್ 2019 (19:00 IST)
ಅತ್ತೆ- ಮಾವನ ಕಿರುಕುಳ ತಾಳಲಾರದೇ ಸೊಸೆಯೊಬ್ಬಳು ಮಾಡಬಾರದ ಕೆಲಸ ಮಾಡಿದ್ದಾಳೆ.

ಕಂಪ್ಯೂಟರ್ ಅಪರೇಟರ್ ಆಗಿರೋ ಸೊಸೆ ಆತ್ಮಹತ್ಯೆಗೆ ಯತ್ನ ನಡೆಸಿದ್ದಾಳೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಆನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಆನೂರು ಗ್ರಾಮದ ನಿವಾಸಿ ನೇತ್ರಾವತಿ  ಆತ್ಮಹತ್ಯೆಗೆ  ಯತ್ನಿಸಿದ ಗೃಹಿಣಿಯಾಗಿದ್ದಾರೆ. ಆನೂರು ಗ್ರಾಮ ಪಂಚಾಯತಿ ಕಛೇರಿಯಲ್ಲಿ ಕೆಲಸ ಮಾಡ್ತಿದ್ದಾರೆ.

ಅತ್ತೆ- ಮಾವನ ಕಿರುಕುಳ ತಾಳಲಾರದೆ ಮನೆಯಲ್ಲಿ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥ ಗೃಹಿಣಿಯನ್ನು ಚಿಂತಾಮಣಿ  ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.  

ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ