ಸರ್ಕಾರದ ವಿರುದ್ಧ ಸಿಡಿದೆದ್ದ ಆಟೋ ಚಾಲಕರು

ಮಂಗಳವಾರ, 13 ಜೂನ್ 2023 (17:59 IST)
ರಾಜ್ಯ ಸರ್ಕಾರ ಫ್ರೀ ಬಸ್‌ ಪ್ರಯಾಣ ಕಲ್ಪಿಸಿಕೊಟ್ಟಿದ್ದು, ಮಹಿಳೆಯರಿಗೆ ಹಬ್ಬದೂಟ ಬಡಿಸಿದಷ್ಟು ಖುಷಿ ತಂದಿದೆ..ಆದರೆ ಈ ಫ್ರೀ ಬಸ್‌ ಅನ್ನೋದು ಕೆಲವರಿಗೆ ಸಂಕಷ್ಟ ತರುವ ಆತಂಕ ಎದುರಾಗಿದೆ. ನಾವೇನು ಮಾಡೋದು, ಸರ್ಕಾರ ಹೀಗೆ ಮಾಡಿ ಬಿಡ್ತಲ್ಲ ಅಂತ ಆಟೋ ಚಾಲಕರು ಕಂಗಾಲಾಗಿದ್ದಾರೆ. ಕರ್ನಾಟಕ ಸರ್ಕಾರ ಮಹಿಳೆಯರಿಗೆ ಫ್ರೀ ಬಸ್‌ ಯೋಜನೆ ಘೋಷಣೆ ಮಾಡಿದೆ. ಮಹಿಳೆಯರೂ ಕೂಡ ಉಚಿತ ಪ್ರಯಾಣದ ಸವಿ ಅನುಭವಿಸುತ್ತಿದ್ದಾರೆ. ಇದರ ಪರಿಣಾಮ ಏನಾಗಿದೆ ಅಂದರೆ ಆಟೋ ಡ್ರೈವರ್‌ಗಳು ಹೊಟ್ಟೆಗೆ ತಣ್ಣೀರು ಬಟ್ಟೆ ಅನ್ನೋ ರೀತಿ ಆಗಿದೆ. ಇನ್ನು ಮನೆ ಬಾಗಿಲಿಗೆ ಆಟೋ ಹೋಗುತ್ತೆ, ಬಸ್ ಹೋಗಲ್ಲ. ಈ ಯೋಜನೆಯಿಂದ ನಮಗೇನೂ ಸಮಸ್ಯೆ ಆಗಲ್ಲ ಎಂದು ಕೆಲವರು ಹೇಳಿದ್ದಾರೆ. ಆದರೂ ಬಹುತೇಕ ಮಂದಿ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ