ಐಸ್‌ ಕ್ರೀಮ್ ಅಂಗಡಿಗೆ ಬೆಂಕಿ

ಮಂಗಳವಾರ, 13 ಜೂನ್ 2023 (14:53 IST)
ಶಾಟ್೯ ಸಕ್ಯೂ‌೯ಟ್​​ನಿಂದ ಐಸ್‌ ಕ್ರೀಮ್ ಅಂಗಡಿ ಬೆಂಕಿಗಾಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿ ಗ್ರಾಮದಲ್ಲಿ ನಡೆದಿದೆ.. S.V. ಬಂಡಾರಿ ಎಂಬುವವರಿಗೆ ಸೇರಿದ ಐಸ್‌ಕ್ರೀಮ್ ಅಂಗಡಿಯಲ್ಲಿ ತಡರಾತ್ರಿ ಶಾರ್ಟ್​ಸಕ್ಯೂ‌೯ಟ್​ ಸಂಭವಿಸಿ ಲಕ್ಷಾಂತರ ಬೆಲೆ ಬಾಳುವ ಫ್ರಿಡ್ಜ್​​​​​ ಸೇರಿದಂತೆ ಅನೇಕ ಸಾಮಾಗ್ರಿಗಳು ಸುಟ್ಟು ಕರಕಲಾಗಿದೆ.. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅಂದಾಜು 40 ಲಕ್ಷಕ್ಕೂ ಅಧಿಕ ಪ್ರಮಾಣದಲ್ಲಿ ನಷ್ಟವಾಗಿದೆ ಇದಕ್ಕೆ ಸೂಕ್ತ ಪರಿಹಾರ ನೀಡುವಂತೆ ಅಂಗಡಿ ಮಾಲೀಕರು ಒತ್ತಾಯ ಮಾಡಿದ್ದಾರೆ.. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ