ಮುಂದೆ ತಮಿಳು ನಾಯಕನಿಗೆ ಪ್ರಧಾನಿ ಪಟ್ಟ
ಮುಂದಿನ ದಿನಗಳಲ್ಲಿ ತಮಿಳುನಾಡಿನ ನಾಯಕರೊಬ್ಬರನ್ನು ದೇಶದ ಪ್ರಧಾನಿಯನ್ನಾಗಿ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ತಮಿಳುನಾಡು ಪ್ರವಾಸ ಕೈಗೊಂಡಿರುವ ಅಮಿತ್ ಶಾ ರಾಜ್ಯ ಬಿಜೆಪಿಯ ಹಿರಿಯ ನಾಯಕರ ಜೊತೆ ಆಪ್ತ ಸಮಾಲೋಚನಾ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಭಾಗಿಯಾದ ಹಿರಿಯ ನಾಯಕರು ಅಮಿತ್ ಶಾ ಅವರ ಹೇಳಿಕೆಯ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಮುಂಬರುವ ದಿನಗಳಲ್ಲಿ ತಮಿಳುನಾಡಿನ ವ್ಯಕ್ತಿ ಈ ದೇಶದ ಪ್ರಧಾನಿಯಾಗಲಿದ್ದಾರೆ ಎನ್ನುವ ರೀತಿಯ ಮಾತುಗಳನ್ನು ಆಡಿದ್ದಾರೆ. ಆದರೆ ಈ ಕುರಿತು ಅಮಿತ್ ಶಾ ಹೆಚ್ಚಿನ ವಿವರ ನೀಡಲಿಲ್ಲ ಎಂದು ತಿಳಿಸಿದ್ದಾರೆ. ವೆಲ್ಲೂರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆಯನ್ನು ಟೀಕಿಸಿದ ಅಮಿತ್ ಶಾ ಆ ಪಕ್ಷಗಳನ್ನು 2ಜಿ, 3ಜಿ, 4ಜಿ ಪಕ್ಷಗಳು ಎಂದು ವ್ಯಂಗ್ಯವಾಡಿದ್ದಾರೆ.ನಾನು 2ಜಿ ಬಗ್ಗೆ ಮಾತನಾಡುವುದಿಲ್ಲ. 2ಜಿ ಅಂದರೆ ಎರಡು ತಲೆಮಾರು, 3ಜಿ ಅಂದರೆ ಮೂರು ತಲೆಮಾರು, 4ಜಿ ಅಂದರೆ ನಾಲ್ಕು ತಲೆಮಾರು ಎಂದು ಹೇಳಿ ಕುಟುಕಿದರು.