ನಾಯಿ ಹೆಸರಲ್ಲಿ ರೆಷನ್ ಪಡೆದ ವ್ಯಕ್ತಿಯನ್ನು ಆಧಾರ್ ಕಾರ್ಡ್ ನಿಂದ ಪತ್ತೆ ಹಚ್ಚಿದ ಅಧಿಕಾರಿಗಳು

ಗುರುವಾರ, 27 ಸೆಪ್ಟಂಬರ್ 2018 (08:53 IST)
ಮಧ್ಯಪ್ರದೇಶ : ಆಧಾರ್ ಕಾರ್ಡ್ ಗೆ ಸಾಂವಿಧಾನಿಕ ಮಾನ್ಯತೆ ನೀಡುವುದರ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ ಬೆನ್ನಲೇ ಇದೀಗ ನಾಯಿಯ ಹೆಸರಲ್ಲಿ ರೇಷನ್ ಪಡೆಯುತ್ತಿದ್ದ ವ್ಯಕ್ತಿಯೊರ್ವನನ್ನು ಆಧಾರ್ ಕಾರ್ಡ್ ಸಹಾಯದಿಂದ ಪತ್ತೆಹಚ್ಚಿದ್ದಾರೆ.


ಮಧ್ಯ ಪ್ರದೇಶದ ಧಾರ್‌ ಜಿಲ್ಲೆಯ ಕುಗ್ರಾಮವೊಂದರ ನಿವಾಸಿ, 75 ವರ್ಷದ ನರ್ಸಿಂಗ್‌ ಬೋದಾರ್‌ ಎಂಬುವವರು ಪಡಿತರ ಚೀಟಿಯಲ್ಲಿ ಪತ್ನಿ ಮತ್ತು ಮಗನ ಹೆಸರು ದಾಖಲಿಸಿದ್ದು, ಕಳೆದ ಕೆಲವು ವರ್ಷಗಳಿಂದ ಸುಮಾರು 60 ಕೆಜಿ ಅಕ್ಕಿ ಮತ್ತು ಗೋಧಿಯನ್ನು ಮಗ ರಾಜು ಹೆಸರಲ್ಲಿ ಕೊಂಡೊಯ್ಯುತ್ತಿದ್ದರು. 


ನಂತರ ಮಗ ರಾಜು ಎಂಬಾತ ಅಸ್ತಿತ್ವದ ಬಗ್ಗೆ ಆಧಾರ್‌ ಕಾರ್ಡ್‌ನಲ್ಲಿ ಲಭ್ಯವಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ರೇಷನ್‌ ಕಾರ್ಡ್‌ ಜತೆಗೆ ಆಧಾರ್‌ ಕಾರ್ಡ್​ನ್ನು ಕೇಳಿದ್ದಾರೆ. ಆಧಾರ್‌ ಕಾರ್ಡ್ ನೀಡದ ಕಾರಣ ಅನುಮಾನಗೊಂಡ ಅಧಿಕಾರಿಗಳು ಆತನ ಮನೆಗೆ ತೆರಳಿ 'ರಾಜು...' ಎಂದು ಕೂಗಿದ್ದಾಗ ಬಾಲ ಅಲ್ಲಾಡಿಸುತ್ತ ಓಡಿ ಬಂದ ನಾಯಿಯನ್ನು ನೋಡಿ ಬೇಸ್ತು ಬಿದ್ದಿದ್ದಾರೆ.


ಆಗ ನರ್ಸಿಂಗ್‌ ಬೋದಾರ್‌ ಮೋಸ ಬೆಳಕಿಗೆ ಬಂದಿದೆ. ಇತ ಸ್ಥಳೀಯ ಪಂಚಾಯಿತಿಯಲ್ಲೇ ಈ  ಕಾರ್ಡ್‌ ತಯಾರಿಸಿದ್ದ ಎಂಬ ವಿಚಾರ ಕೂಡ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ