ಅಯೋಧ್ಯೆಯಲ್ಲಿ ಸೋಮವಾರ ಸಂಜೆಯಿಂದ ಅದ್ಧೂರಿ ದೀಪೋತ್ಸವಕ್ಕೆ ಚಾಲನೆ

ಬುಧವಾರ, 3 ನವೆಂಬರ್ 2021 (20:27 IST)
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸೋಮವಾರ ಸಂಜೆಯಿಂದ ಅದ್ಧೂರಿ ದೀಪೋತ್ಸವಕ್ಕೆ ಚಾಲನೆ ನೀಡಲಾಗಿದೆ. ದೀಪೋತ್ಸವದ ಕೇಂದ್ರ ಬಿಂದು ‘ರಾಮ್‌ ಕಿ ಪೈದಿ’ ಘಾಟ್‌ ಅನ್ನು ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸಲಾಗಿದೆ..ರಾಮ್ ಕಥಾ ಪಾರ್ಕ್‌ನಲ್ಲಿ ಶಿಲ್ಪ ಬಜಾರ್ ಉದ್ಘಾಟನೆಯೊಂದಿಗೆ ದೀಪಾವಳಿ ಆಚರಣೆಗಳು ಪ್ರಾರಂಭವಾಗಿವೆ.. ಬುಧವಾರ 9 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಿ ಸ್ಥಳೀಯ ಆಡಳಿತ ಮಂಡಳಿ ಗಿನ್ನಿಸ್ ದಾಖಲೆ ಮಾಡಿದೆ....ಇದಕ್ಕಾಗಿ 12,000 ಸ್ವಯಂಪ್ರೇರಿತರನ್ನು ನಿಯೋಜಿಸಲಾಗಿತ್ತು..ಉಳಿದ 32 ಘಾಟ್ ಗಳೂ ಕೂಡ ದೀಪಗಳಿಂದ ಅಲಂಕೃತಗೊಂಡಿದ್ದವು..ಇದೇ ಮೊದಲ ಬಾರಿಗೆ ಉತ್ತರ ಪ್ರದೇಶ ಸರ್ಕಾರವು 500 ಡ್ರೋನ್ ಗಳನ್ನು ಬಳಸಿ ದೀಪೋತ್ಸವ ಅದ್ಭುತ ದೃಶ್ಯವನ್ನು ಸೆರೆಹಿಡಿದಿದೆ..ಸತತ 5 ವರ್ಷಗಳಿಂದ ಅಯೋಧ್ಯೆಯಲ್ಲಿ ದೀಪೋತ್ಸವನ್ನು ನಡೆಸಿಕೊಂಡು ಬರಲಾಗುತ್ತಿದೆ.,ನವೆಂಬರ್ 1 ರಿಂದ 5 ರವರೆಗೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿವೆ.. ರಾಮ್ ಲೀಲಾವನ್ನು ಪ್ರದರ್ಶಿಸಲು ಶ್ರೀಲಂಕಾದಿಂದ ಸಾಂಸ್ಕೃತಿಕ ತಂಡವನ್ನು ಕೂಡ ಆಹ್ವಾನಿಸಲಾಗಿದೆ..ದೀಪೋತ್ಸವದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅಧಿತ್ಯನಾಥ್ ಸೇರಿದಂತೆ ಸಚಿವರು, ಶಾಸಕರು ಉಪಸ್ಥಿತರಿದ್ರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ