ಬಿ.ಶ್ರೀರಾಮುಲು ಚೇತರಿಕೆಗೆ ನಿತ್ಯ ಒಡೆಯುತ್ತಿರುವ ಟೆಂಗು ಎಷ್ಟು?
ರಾಜ್ಯದ ಆರೋಗ್ಯ ಸಚಿವರಿಗೆ ತಗುಲಿರುವ ಕೊರೊನಾದಿಂದ ಗುಣಮುಖರಾಗಲೆಂದು ಅವರ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಕೋಟೆ ಮಲ್ಲೇಶ್ವರ ದೇವಸ್ಥಾನದಲ್ಲಿ ಬಿ.ಶ್ರೀರಾಮುಲು ಅವರ ಆಪ್ತ ಮಾಜಿ ಉಪಮೇಯರ್ ಗೋವಿಂದ ರಾಜುಲು 116 ತೆಂಗಿನಕಾಯಿ ಒಡೆದರು. ಶನಿವಾರದವರೆಗೆ ನಿತ್ಯವೂ ಸಾಯಿಬಾಬಾ, ರಾಘವೇಂದ್ರ, ಆಂಜನೇಯ, ಏಳು ಮಕ್ಕಳ ತಾಯಿ, ದುರ್ಗಮ್ಮ ದೇವಸ್ಥಾನದಲ್ಲಿ ತೆಂಗಿನಕಾಯಿ ಒಡೆಯುವುದಾಗಿ ತಿಳಿಸಿದ್ದಾರೆ.