ಐಪಿಎಲ್ ಗೆ ಇನ್ನೂ ಮುಗಿದಿಲ್ಲ ಚೀನಾ ಪ್ರಾಯೋಜಕರ ರಗಳೆ

ಸೋಮವಾರ, 10 ಆಗಸ್ಟ್ 2020 (12:26 IST)
ಮುಂಬೈ: ಐಪಿಎಲ್ 13 ಟೈಟಲ್ ಪ್ರಾಯೋಜಕತ್ವದಿಂದ ಚೀನಾ ಮೂಲದ ವಿವೋ ಕಂಪನಿ ಹಿಂದೆ ಸರಿಯುತ್ತಿದ್ದಂತೇ ಎಲ್ಲಾ ವಿವಾದ ಮುಗಿಯಿತು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಇನ್ನೂ ವಿವಾದ ಮುಗಿದಿಲ್ಲ.

 

ಐಪಿಎಲ್ ನಲ್ಲಿ ಇನ್ನೂ ಚೀನಾ ಮೂಲದ ಪ್ರಾಯೋಜಕರಿದ್ದಾರೆ. ಡ್ರೀಮ್ 11, ಬೈಜುಸ್, ಪೇಟಿಎಂ ಮುಂತಾದ ಚೀನಾ ಮೂಲದ ಕಂಪನಿಗಳು ಪ್ರಾಯೋಜಕರಾಗಿ ಮುಂದುವರಿದಿದ್ದಾರೆ.

ಇದರ ಬಗ್ಗೆ ಈಗ ಸ್ವದೇಶಿ ಜಾಗರಣ ವೇದಿಕೆ ಅಪಸ್ವರವೆತ್ತಿದೆ. ಈ ಕಂಪನಿಗಳನ್ನೂ ಪ್ರಾಯೋಜಕರ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ವೇದಿಕೆ ಆಗ್ರಹಿಸಿದೆ. ಇದಕ್ಕೂ ಮೊದಲು ವಿವೋವನ್ನೇ ಪ್ರಾಯೋಜಕತ್ವದಿಂದ ಹೊರ ಹಾಕಲು ಹಿಂದೆ ಮುಂದೆ ನೋಡಿತ್ತು. ಕೊನೆಗೆ ಸ್ವತಃ ವಿವೋ ಪ್ರಾಯೋಜಕತ್ವದಿಂದ ಹೊರಬಂದಿದೆ. ಈಗ ಇದೇ ವಿಚಾರ ಐಪಿಎಲ್ ಗೆ ಅಡ್ಡಿಯಾಗುವ ಆತಂಕವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ