ಮುಂದಿನ ವರ್ಷದ ಐಪಿಎಲ್ ಗೆ ಹರಾಜು ಪ್ರಕ್ರಿಯೆಯೇ ನಡೆಯಲ್ಲ

ಸೋಮವಾರ, 10 ಆಗಸ್ಟ್ 2020 (12:37 IST)
ಮುಂಬೈ: ಹಾಗೋ ಹೀಗೋ ಮಾರ್ಚ್ ನಲ್ಲಿ ನಡೆಯಬೇಕಿದ್ದ ಐಪಿಎಲ್ ನ್ನು ಬಿಸಿಸಿಐ ಸೆಪ್ಟೆಂಬರ್ ನಲ್ಲಿ ನಡೆಸಲು ತಯಾರಿ ನಡೆಸಿದೆ. ಆದರೆ ಮುಂದಿನ ವರ್ಷಕ್ಕೆ ಅಂದರೆ 2021 ರ ಐಪಿಎಲ್ ನಲ್ಲಿ ಹರಾಜು ಪ್ರಕ್ರಿಯೆ ನಡೆಯೋದು ಅನುಮಾನವಾಗಿದೆ.


2021 ರ ಐಪಿಎಲ್ ಡಿಸೆಂಬರ್ ನಿಂದಲೇ ಹರಾಜು ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ 2020 ರ ಐಪಿಎಲ್ ತಡವಾಗಿ ನಡೆಯುತ್ತಿರುವುದರಿಂದ ಮುಂದಿನ ವರ್ಷದ ಐಪಿಎಲ್ ಗೆ ಹರಾಜು ಪ್ರಕ್ರಿಯೆ ನಡೆಸುವುದು ಅನುಮಾನವಾಗಿದೆ.

ಕೊರೋನಾದಿಂದಾಗಿ ಆರ್ಥಿಕ ಸಂಕಷ್ಟ ಉಂಟಾಗಿರುವ ಹಿನ್ನಲೆಯಲ್ಲಿ ಬಿಸಿಸಿಐ ಈ ಬಗ್ಗೆ ಚಿಂತನೆ ನಡೆಸಿದೆ. ಹರಾಜು ನಡೆಸದೇ ಈಗಿರುವ ತಂಡಗಳನ್ನೇ ಫ್ರಾಂಚೈಸಿಗಳು ಮುಂದಿನ ಐಪಿಎಲ್ ಗೂ ಮುಂದುವರಿಸಲು ಬಿಸಿಸಿಐ ಸಲಹೆ ನೀಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ