ಸದಸ್ಯತ್ವ ಹಿನ್ನಡೆಗೆ ಬಿಜೆಪಿ ಶಾಸಕರು ಕಾರಣ: ಬಿ ವೈ ವಿಜಯೇಂದ್ರ

Krishnaveni K

ಶನಿವಾರ, 21 ಸೆಪ್ಟಂಬರ್ 2024 (09:16 IST)
ಬೆಂಗಳೂರು: ಭಾರತೀಯ ಜನತಾ ಪಾರ್ಟಿ- ಬೆಂಗಳೂರು ದಕ್ಷಿಣ ಜಿಲ್ಲೆ ಸದಸ್ಯತ್ವ ಅಭಿಯಾನ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಬಿ ವೈ ವಿಜಯೇಂದ್ರ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರಮೋದಿ ರವರು ಒಂದು ದೇಶ ಒಂದು ಚುನಾವಣೆ ಮಸೂದೆ ಜಾರಿಗೆ ಬಂದಿದೆ ಇದರಿಂದ ರಾಜಕೀಯದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂದಿದ್ದಾರೆ.

ಸದಸ್ಯತ್ವ ಅಭಿಯಾನ ಮಂದಗತಿಯಲ್ಲಿ ಸಾಗುತ್ತಿದೆ ಇದಕ್ಕೆಲ್ಲ ಕಾರಣ ನಗರ ಬಿಜೆಪಿ  ಶಾಸಕರು.ಬಿಬಿಎಂಪಿ ಚುನಾವಣೆ ಸಕಾಲದಲ್ಲಿ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲ್ಲಿಲ. ಹಿಂದೆ ಕಾರ್ಯಕರ್ತರು ಮತ್ತು ಮುಖಂಡರ ನಡುವೆ ಜಾತಿ, ಮತ ಭೇದ ಇಲ್ಲದೇ ಎಲ್ಲರು ಒಂದೇ ಏನ್ನುವ ಕಾಲವಾಗಿತ್ತು. ಅದರೆ ಇಂದು ಜಾತಿಯ ಮೇಲೆ ರಾಜಕೀಯ ನಡೆಯುತ್ತಿದೆ.

ವಿದ್ಯುತ್ ದರ ಹೆಚ್ಚಳ ವಿರುದ್ದ ವಿಧಾನಸೌಧ ಮುಂದೆ ಜೆ.ಹೆಚ್.ಪಟೇಲ್ ಸರ್ಕಾರ ವಿರುದ್ದ ಹೋರಾಟ, ಈದ್ಗ ಮೈದಾನ ವಿರುದ್ದ ಹೋರಾಟ ಮಾಡಿದ ಬಿ.ಎಸ್.ಯಡಿಯೂರಪ್ಪರವರ ಹೋರಾಟವನ್ನು  ಅಟಲ್ ಬಿಹಾರಿ ವಾಜಪೇಯಿ ರವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಂದು ವಿರೋಧ ಪಕ್ಷದಲ್ಲಿ ಇದ್ದವು.

ಯಡಿಯೂರಪ್ಪ, ಅನಂತ್ ಕುಮಾರ್ ಮತ್ತು ಕಾರ್ಯಕರ್ತರ ಶ್ರಮದಿಂದ ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕವಾಗಿದೆ. ರಾಜ್ಯದಲ್ಲಿ ಎರಡು ಬಾರಿ ಅಧಿಕಾರ ಅನುಭವಿಸಿದ್ದೇವೆ, ನಮ್ಮ ಬಿಜೆಪಿ ಸರ್ಕಾರವಿದ್ದಾಗ ಬೆಂಗಳೂರುನಗರ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಲಾಗಿದೆ.

ಕಾರ್ಯಕರ್ತರ ಮತ್ತು ಮುಖಂಡರ ನಡುವೆ ಉತ್ತಮ ಒಡನಾಟವಿಲ್ಲದ ಇರುವ ಕಾರಣ, ಸ್ವಹಿತಾಸಕ್ತಿ ನಾನು, ನನ್ನ ಸಂಭಂದಿಕರು ಮಾತ್ರ ರಾಜಕೀಯ ಅಧಿಕಾರ ಅನುಭವಿಸುವ ಬೇಕು ದುರಾಸೆಯಿಂದ ಕಾರ್ಯಕರ್ತರ ನಿರಾಸಕ್ತಿ ಹೊಂದಿದ್ದಾರೆ, ಮುಖಂಡರು ಎಷ್ಟು ಗೌರವ ಕೊಡುತ್ತೇವೆಯೆ ಅಷ್ಟೆ ಗೌರವ ಕಾರ್ಯಕರ್ತನಿಗೂ ಕೊಡಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ