ದೇವೆಗೌಡರ ಕುಟುಂಬ ರಾಜಕೀಯದ ವಿರುದ್ಧ ಬಾಬುರಾವ್ ಚಿಂಚನಸೂರು ವ್ಯಂಗ್ಯ
ಬುಧವಾರ, 27 ಮಾರ್ಚ್ 2019 (09:27 IST)
ಬೆಂಗಳೂರು : ಎರಡು ಕ್ಷೇತ್ರಗಳಲ್ಲಿ ಮೊಮ್ಮಕ್ಕಳನ್ನು ನಿಲ್ಲಿಸಿ , ಮತ್ತೊಂದು ಕ್ಷೇತ್ರದಲ್ಲಿ ತಾನು ಸ್ಪರ್ಧಿಸುತ್ತಿರುವ ಜೆಡಿಎಸ್ ನ ವರಿಷ್ಠ ಹೆಚ್.ಡಿ.ದೇವೆಗೌಡರ ಕುಟುಂಬ ರಾಜಕೀಯದ ವಿರುದ್ಧ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ವ್ಯಂಗ್ಯವಾಡಿದ್ದಾರೆ.
ಕಲಬುರಗಿಯಲ್ಲಿ ನಡೆದ ಕೋಲಿ ಸಮಾಜ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡರಿಗೆ 224 ಮೊಮ್ಮಕ್ಕಳಿದ್ದಿದ್ದರೆ ಎಲ್ಲ ಕ್ಷೇತ್ರಗಳಲ್ಲಿ ಅವರೇ ಸ್ಪರ್ಧೆ ಮಾಡುತ್ತಿದ್ದರು. ಆದ್ರೆ ಅಷ್ಟು ಮಂದಿ ಯಾಕೆ ಮೊಮ್ಮಕ್ಕಳಿಲ್ಲ ಅಂತ ಅವರು ಚಿಂತೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಹಾಗೇ ಕಲಬುರಗಿಯಲ್ಲಿಯೂ ತಂದೆ, ಮಗ ಅಷ್ಟೇ ಇರಬೇಕು ಅಂತಾ ಎಲ್ಲರನ್ನೂ ಹೊರಗೆ ಹೋಗೋ ಹಾಗೇ ಮಾಡಿದ್ದಾರೆ ಅಂತ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಬಾಬುರಾವ್ ಚಿಂಚನಸೂರು ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.