ಮಗುವನ್ನು ದಡದಲ್ಲಿ ನಿಲ್ಲಿಸಿ : ಕಾಲುವೆಗೆ ಹಾರಿದ ತಾಯಿ!
ಮೃತ ದುರ್ದೈವಿಯನ್ನು ಸರಸ್ವತಿ(38) ಎಂದು ಗುರುತಿಸಲಾಗಿದ್ದು, ಮಗುವಿಗೆ ತಾಯಿ ಎಲ್ಲಿ ಎಂದು ಕೇಳಿದರೆ ಕಾಲುವೆ ಕಡೆಗೆ ತೋರಿಸುವ ದೃಶ್ಯ ಮನಕಲಕುವಂತಿದೆ. ಸದ್ಯ ಮಗುವಿನ ಹೇಳಿಕೆ ಆಧರಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಸರಸ್ವತಿಯನ್ನು ಕಳೆದ ಹದಿನೆಂಟು ವರ್ಷದ ಹಿಂದೆ ಆಂಧ್ರದ ಬೊಮ್ಮನಾಳ್ ಗ್ರಾಮಕ್ಕೆ ಕೊಟ್ಟು ಮದುವೆ ಮಾಡಲಾಗಿತ್ತು. ಮೂವರು ಮಕ್ಕಳಿರುವ ಸರಸ್ವತಿಯ ಆರೋಗ್ಯ ಕೆಲ ದಿನಗಳ ಹಿಂದೆ ಹದಗೆಟ್ಟಿರುವ ಹಿನ್ನೆಲೆ ತಮ್ಮ ತವರು ಮನೆಯಲ್ಲಿ ವಾಸವಾಗಿದ್ದರು.
ಇದೀಗ ಮಹಿಳೆ ಕಾಣೆಯಾಗಿರುವುದರಿಂದ ಅವರ ತಂದೆ ಮಾರೆಪ್ಪ ಅವರು ಕುಡತಿನಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಿದ್ದಾರೆ.