ಬಾಲಗಂಗಾಧರನಾಥ ಶ್ರೀಗಳ ಸ್ಮರಣೆ: ಚಿತ್ರನಟರು ಭಾಗಿ
ಶನಿವಾರ, 25 ಜನವರಿ 2020 (20:06 IST)
ಜಗದ್ಗುರು ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಶ್ರೀಗಳ 7ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಚಿತ್ರನಟರು ಪಾಲ್ಗೊಂಡಿದ್ರು.
ಮಂಡ್ಯದ ಬಿಜಿಎಸ್ ಶಾಲೆಯಲ್ಲಿ ಜಗದ್ಗುರು ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಶ್ರೀಗಳ 7ನೇ ವರ್ಷದ ಪುಣ್ಯಸ್ಮರಣೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭವು ವರ್ಣರಂಜಿತವಾಗಿ ನಡೆಯಿತು.
ಚಲನಚಿತ್ರ ನಟರಾದ ಜೈಜಗದೀಶ್, ವಿಜಯಲಕ್ಷ್ಮೀ ಸಿಂಗ್ ಮತ್ತು ಹಿರಿಯ ನಟಿ ಪ್ರತಿಮಾದೇವಿ ಸಮಾರಂಭದ ಆಕರ್ಷಣೆಯಾಗಿದ್ದರು.
ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಮಹಾಪ್ರಭು ಮಹಾಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಶ್ರೀಗಳ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ್ರು.
ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರು ಹಾಗೂ ಮಕ್ಕಳನ್ನು ರಂಜಿಸಿದವು.