ಖಾಸಗಿ ಸಾರಿಗೆಗಳ ಬಂದ್ – 32 ಸಂಘಟನೆಗಳ ಬೆಂಬಲ

ಶುಕ್ರವಾರ, 1 ಸೆಪ್ಟಂಬರ್ 2023 (14:24 IST)
ಬೇಡಿಕೆಗಳ ಈಡೇರದ ಹಿನ್ನೆಲೆಯಲ್ಲಿ ಸೆ. 11 ರಂದು ಬೆಂಗಳೂರು ಬಂದ್ ನಡೆಸಲು ಕರೆ ನೀಡುತ್ತಿರುವುದಾಗಿ ಖಾಸಗಿ ಸಾರಿಗೆಗಳ ಒಕ್ಕೂಟ ಘೋಷಿಸಿದೆ. ಶುಕ್ರವಾರ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಒಕ್ಕೂಟ, ಬಂದ್ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. 
ಕೋವಿಡ್ ಹೊಡೆತದಿಂದ ತತ್ತರಿಸಿದ್ದ ಖಾಸಗಿ ವಾಹನಗಳ ಸಾರಿಗೆ ಉದ್ಯಮ ತುಸು ಚೇತರಿಕೆ ಕಾಣಲಾರಂಭಿಸಿತ್ತು. ಅಷ್ಟರಲ್ಲೇ ಗೃಹಶಕ್ತಿ ಯೋಜನೆಯ ಮೂಲಕ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದ್ದು, ಒಟ್ಟಾರೆ ಆದಾಯದಲ್ಲಿ ಶೇ 45 ರಷ್ಟು ಕುಸಿತ ಕಂಡು ಬಂದಿದೆ  ಎಂದು ಖಾಸಗಿ ವಾಹನಗಳ ಸಂಘಟನೆಗಳು ಅವಲತ್ತುಕೊಂಡಿದ್ದಾರೆ. 
 
ಈ ಕುರಿತು ಮಾತನಾಡಿದ ಒಕ್ಕೂಟದ ನಾಮನಿರ್ದೇಶಿತ ಅಧ್ಯಕ್ಷ ನಟರಾಜ್ ಶರ್ಮಾ, ಸಚಿವ ರಾಮಲಿಂಗಾರೆಡ್ಡಿಯವರು ನಮ್ಮೊಡನೆ ಪ್ರತ್ಯೇಕವಾಗಿ ಸಭೆ ನಡೆಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಕೊಟ್ಟ ಅವಧಿಯ ಗಡುವು ಮುಗಿದು ಒಂದು ತಿಂಗಳಾದರೂ ಯಾವುದೇ ನೆರವು ಸಿಕ್ಕಿಲ್ಲ ಎಂದು ಆರೋಪಿಸಿದರು.
 
 ಟೋಲ್ ದರ ಕಡಿಮೆ ಮಾಡಬೇಕು, ಸಾರಿಗೆ ಉದ್ಯಮಿಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು, ಸಾಲದ ಸುಳಿಯಲ್ಲಿರುವ ವಾಹನಗಳ ಮಾಲಿಕರಿಗೆ ಹಣಕಾಸಿನ ನೆರವು ನೀಡಬೇಕು ಎಂಬುದು ಒಕ್ಕೂಟದ ಬೇಡಿಕೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ