ಖಾಸಗಿ ಸಾರಿಗೆ ಸಂಘಟನೆಗಳಿಂದ ಬೆಂಗಳೂರು ಬಂದ್ !

ಶನಿವಾರ, 19 ಆಗಸ್ಟ್ 2023 (16:23 IST)
ಬೆಂಗಳೂರು ಬಂದ್ ದಿನಾಂಕ ಇಂದೇ ತೀರ್ಮಾನವಾಗಲಿದೆ.ಹೀಗಾಗಿ ಇಂದು  ಖಾಸಗಿ ಸಾರಿಗೆ ಸಂಘಟನೆಗಳು ಸಭೆ ನಡೆಸಲಿದೆ.ಇಂದು 32ಖಾಸಗಿ‌ ಸಾರಿಗೆ ಸಂಘಟನೆಗಳ ಪದಾಧಿಕಾರಿಗಳ ಸಭೆ ನಡೆಯಲಿದ್ದು,ಇಂದಿನ ಸಭೆಯಲ್ಲಿನ ಚರ್ಚೆಯ ಕುರಿತು‌ ಅಗಸ್ಟ್ 21ರಂದು ಸುದ್ದಿಗೋಷ್ಠಿ ನಡೆಸಲಾಗಿತ್ತೆ.
 
ಅಗಸ್ಟ್ 21ರ  ಸುದ್ದಿ ಗೋಷ್ಠಿಯಲ್ಲಿ  ಬೆಂಗಳೂರು ಬಂದ್‌ ದಿನಾಂಕ ಪ್ರಕಟವಾಗಲಿದ್ದು,ಸಾರಿಗೆ ಸಚಿವರ ಮಾತುಕತೆ ವಿಫಲ, ಸಿಎಂ‌ ಜೊತೆ ಸಭೆಗೆ  ಸಾರಿಗೆ ಒಕ್ಕೂಟ ಅವಕಾಶ ಕೇಳಿತ್ತು‌.ಸಿಎಂ‌ ಜೊತೆ ಸಭೆ ಏರ್ಪಡಿಸದ ಹಿನ್ನೆಲೆ ಬಂದ್ ಗೆ ತಿರ್ಮಾನ ಮಾಡಲಾಗಿತ್ತು.ಈ‌ ಮೊದಲು ಸಾರಿಗೆ ಸಚಿವರ ಮಾತಿಗೆ ಬೆಲೆ ಕೊಟ್ಟು ಬಂದ್ ಸಂಘಟನೆಗಳು ಮುಂದುಡಿದ್ವು.ಸಿಎಂ‌ ಜೊತೆ ಅಗಸ್ಟ್ 18ರೊಳಗೆ ಮಾತುಕತೆಗೆ ಅವಕಾಶ ಮಾಡಿಕೊಡುವ ಭರವಸೆ ಸಾರಿಗೆ ಸಚಿವರು ನೀಡಿದ್ರು.ಸಿಎಂ‌ ಜೊತೆ ಯಾವುದೇ ಸಭೆ ಏರ್ಪಡಿಸದ ಹಿನ್ನೆಲೆ  ಸಚಿವರ ವಿರುದ್ಧ ಸಾರಿಗೆ ಸಂಘಟನೆಗಳ ಆಕ್ರೋಶ ಹೊರಹಾಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ