ಬೆಂಗಳೂರು ಅಪಾರ್ಟ್ಮೆಂಟ್ ಸೀಲ್ ಡೌನ್

ಬುಧವಾರ, 29 ಡಿಸೆಂಬರ್ 2021 (19:07 IST)
ಬ್ಯಾಡ್ಮಿಂಟನ್ ಟೂರ್ನಮೆಂಟ್‍ನಿಂದ ಅಪಾರ್ಟ್‍ಮೆಂಟ್‍ವೊಂದರಲ್ಲಿ ಕೊರೊನಾ ಸ್ಫೋಟ ಗೊಂಡಿದ್ದು, 27 ಮಂದಿಗೆ ಸೋಂಕು ತಗುಲಿ ಆತಂಕ ಸೃಷ್ಟಿಸಿದೆ.
ಓಕಳಿಪುರಂನಲ್ಲಿರುವ ಇಂದ್ರಪ್ರಸ್ಥ ಆಪಾರ್ಟ್‍ಮೆಂಟ್ ನಿವಾಸಿಗಳು ಕಳೆದ ಡಿ.19ರಂದು ಬ್ಯಾಡ್ಮಿಂಟನ್ ಟೂರ್ನಮೆಂಟ್ ಆಯೋಜಿಸಿದ್ದರು. ಇದರಲ್ಲಿ ಪಾಲ್ಗೊಂಡವರು ವಿದೇಶಕ್ಕೆ ತೆರ ಳುವ ಹಿನ್ನೆಲೆಯಲ್ಲಿ ಕೊರೋನಾ ಪರೀಕ್ಷೆ ಮಾಡಲಾಗಿದ್ದು, 27 ಮಂದಿಗೆ ಸೊಂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
 
ಸೋಂಕು ಸೋಟದಿಂದ ಅಪಾರ್ಟ್‍ಮೆಂಟ್ ಹಾಗೂ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಉಳಿದವರು ಕೂಡ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದು, ಅಪಾರ್ಟ್‍ಮೆಂಟ್‍ನಲ್ಲಿ ಕ್ವಾರಂಟೈನ್ ಆಗಿದ್ದು ಯಾರೂ ಆತಂಕ ಪಡಬೇಕಾಗಿಲ್ಲ. ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅಪಾರ್ಟ್‍ಮೆಂಟ್‍ಗೆ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ