ಬೆಂಗಳೂರಿನ ಜಯನಗರದಲ್ಲಿ ನಾಯಿ ಮೇಲೆ ರೇಪ್ ಮಾಡಿ ರಾಕ್ಷಸೀಯ ಕೃತ್ಯ
ಇದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಿನಿ ಗ್ರೌಂಡ್ ಬಳಿ ಈ ಘಟನೆ ನಡೆದಿದೆ. ಗಂಡು ನಾಯಿಯ ಜನನಾಂಗವನ್ನು ಕೊಯ್ದು ಓರ್ವ ಸಂಭೋಗಿಸಿದ್ದಾನೆ.
ಈತನನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರತಿನಿತ್ಯ ವಿದ್ಯಾ ಎಂಬ ಮಹಿಳೆ ಬೀದಿ ನಾಯಿಗಳಿಗೆ ಊಟ ಹಾಕುತ್ತಾರೆ. ಅವರ ಗಮನಕ್ಕೆ ಕೃತ್ಯ ಬಂದಿದೆ.
ನಾಯಿಗೆ ಗಾಯಗಳಾಗಿದ್ದು ಸದ್ಯಕ್ಕೆ ಅದನ್ನು ರಕ್ಷಿಸಿ ಪುನವರ್ಸತಿ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ನಾಗರಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.