ಬೆಂಗಳೂರು ಮದ್ದೂರು ಹೆದ್ದಾರಿ ಅವ್ಯವಸ್ಥೆ (ನಿತ್ಯ ನರಕ )

ಸೋಮವಾರ, 18 ಅಕ್ಟೋಬರ್ 2021 (13:59 IST)
ಪಟ್ಟಣದ ವ್ಯಾಪ್ತಿಯಲ್ಲಿ ಹಾದು ಹೋಗುವ ಮೈಸೂರು- ಬೆಂಗ ಳೂರು ದಶಪಥ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿ ಮುಂಜಾಗ್ರತಾ ಕ್ರಮ ಅನುಸರಿಸದೆ ಇರುವುದರಿಂದ ಪಟ್ಟಣ ವ್ಯಾಪ್ತಿಯಲ್ಲಿ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.
ಸುಮಾರು ಒಂದೂವರೆ ವರ್ಷದಿಂದ ನಡೆಯುತ್ತಿರುವ ಫ್ಲೈಓವರ್ ಕಾಮಗಾರಿಯಿಂದಾಗಿ ಸ್ಥಳೀಯರು ಹಾಗೂ ಮದ್ದೂರು ಪಟ್ಟಣದ ಮೂಲಕ ಸಂಚರಿಸುವ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಮೈಸೂರು ದಸರಾ ವೀಕ್ಷಿಸಲು ವಿವಿಧೆಡೆಯಿಂದ ಮದ್ದೂರು ಮೂಲಕ ತೆರಳುತ್ತಿದ್ದವರು ರಸ್ತೆಯಲ್ಲೇ ಕಾಲುವೆ ಯಂತೆ ಹರಿಯುತ್ತಿರುವ ಒಳಚರಂಡಿ ನೀರಿನಿಂದ ತೊಂದರೆಗೊಳಗಾದರು. ಪಟ್ಟಣದ ಸರ್ಕಾರಿ ಬಸ್ ನಿಲ್ದಾಣ, ಕೋರ್ಟ್ ಪಕ್ಕ, ತಾಲ್ಲೂಕು ಕಚೇರಿ ಮುಂದೆ ಸೇರಿದಂತೆ ವಿವಿಧೆಡೆ ಒಳ ಚರಂಡಿ ಸಂಪರ್ಕದ ಪೈಪ್‌ಗಳು ಹೆದ್ದಾರಿ ಕಾಮಗಾರಿ ವೇಳೆ ಹಾಳಾಗಿವೆ. ಇದರಿಂದಾಗಿ ಒಳಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದೆ. ರಾತ್ರಿ ವೇಳೆ ಸಂಚರಿಸುವ ವಾಹನ ಚಾಲಕರಿಗೆ ರಸ್ತೆಯ ಅಂದಾಜು ಸಿಗುತ್ತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ