ರಾಜಧಾನಿಯ ಸಿಗ್ನಲ್ ಗಳಲ್ಲಿ" ಬೆಂಗಳೂರು ಹುಡುಗರು" ತಂಡದ ವಿನೂತನ ಅಭಿಯಾನ

ಭಾನುವಾರ, 17 ಅಕ್ಟೋಬರ್ 2021 (21:55 IST)
ಬೆಂಗಳೂರು: ಭಿಕ್ಷಾಟನೆ ಮತ್ತು ಮಾನವ ಕಳ್ಳ ಸಾಗಣೆ ಇವೆರಡು ಪ್ರಸ್ತುತ ನಾಗರೀಕ ಪಿಡುಗಾಗಿದೆ, ಇದನ್ನು ನಿರ್ಮೂಲನೆ ಮಾಡುವ ಮೂಲಕ "ನಮ್ಮ ಬೆಂಗಳೂರು ಹುಡುಗರು" ತಂಡದ ಸದಸ್ಯರು ವಿನೂತನ ಹೋರಾಟ ಹಮ್ಮಿಕೊಂಡಿದ್ದಾರೆ. ಮಳೆ ಮುಕ್ತ ಅಭಿಯಾನದ ಜೊತೆಗೆ ಪ್ರತಿ ಭಾನುವಾರ ನೆಡೆಯುವ ಭಿಕ್ಷಾಟನೆ ಮುಕ್ತ ಜಾಗೃತಿ ಕಾರ್ಯ ಇಂದು 10 ನೇ ವಾರಕ್ಕೆ ತಲುಪಿದೆ.
 
ಭಿಕ್ಷುಕರು ಎಂದಿನ ಸಮಯದಲ್ಲಿ ಜೇಬಿನಲ್ಲಿದ್ದ ಬಿಡಿಗಾಸು ತಗೆದು ತಟ್ಟೆಗೆ ಹಾಕುವ ಕೆಲಸವನ್ನು ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ. ಆದರೆ ಆ ಭಿಕ್ಷಾಟನೆ ಹಿಂದೆ ಭಯಾನಕ ಜಾಲ ಇದ್ದು ಮುಗ್ಧ ಮಹಿಳೆಯರಿಗೆ ಮತ್ತು ಮಕ್ಕಳ ಮಾನಸಿಕ ಹಿಂಸೆ ನೀಡಿ ಯಾವೆಲ್ಲ ರೀತಿಯಲ್ಲಿ ಬಳಸಿಕೊಳ್ಳುವುದು. ಮಾನವ ಕಳ್ಳ ಸಾಗಣೆಯಿಂದ ಯಾವೆಲ್ಲ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವಾಗ ಸ್ಪಷ್ಟ ಸ್ಪಷ್ಟ ಅರಿವು ಹೊಂದಿರುವ ನಮ್ಮ ಬೆಂಗಳೂರು ಹುಡುಗರ ತಂಡದ ಸದಸ್ಯರಿಂದ ವಿನೂತನ ಅಭಿಯಾನ ಆರಂಭವಾಗಿ ಯಶಸ್ವಿಯಾಗಿ ನೆಡೆಯುತ್ತಿದೆ.
 
ಭಿತ್ತಿ ಪತ್ರ ಹಿಡಿದು ಸಿಗ್ನಲ್ ಗಳಲ್ಲಿ ಜಾಗೃತಿ: 
 
ಸಾಮಾನ್ಯವಾಗಿ ಭಿಕ್ಷಾಟನೆ ಮಾಡುವ ಮಹಿಳೆಯರು ಮತ್ತು ಮಕ್ಕಳ ಹಿಂದೆ ಒಂದು ವ್ಯವಸ್ಥಿತ ಷಡ್ಯಂತ್ರ ಅಡಗಿದೆ. ಮಕ್ಕಳ ಕೈಯಲ್ಲಿ ಪೆನ್ನು, ಪುಸ್ತಕ ಕೊಟ್ಟು ಮಾರಾಟ ಮಾಡುವ ಉದ್ದೇಶದ ಹಿಂದೆ ಬೇರೆಯೊಂದು ದೃಷ್ಟಿಕೋನ ಅಡಗಿದೆ ಎಂದರೆ ಈ ಅಭಿಯಾನದ ರೂವಾರಿ ಡಿ.ಆರ್.ಡಿ. ಸಂಸ್ಥೆಯ ಸಂಸ್ಥೆಯ ವಿನೋದ್ ಕರ್ತವ್ಯ.
 
ಭಿಕ್ಷಾಟನೆ ನಿಷೇಧ ಕಾಯ್ದೆ 1975 ರ ಪ್ರಕಾರ ನಿರ್ಗತಿಕರಿಗೆ ಜೀವನ ನಡೆಸಲು ಸರ್ಕಾರದಿಂದ ಉದ್ಯೋಗ ತರಬೇತಿ ನೀಡುವಿಕೆ. ಈ ಕುರಿತು ಅವರಿಗೆ ಸರಿಯಾದ ಮಾಹಿತಿ ನೀಡಬೇಕಾದ ಅಗತ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
 
ಹಣ ನೀಡದಿದ್ದರೆ ಗ್ಯಾಂಗ್ ಒಡೆಯುತ್ತದೆ: 
 
ಭಿಕ್ಷಾಟನೆ ಮಾಡುವವರಿಗೆ ಅಗತ್ಯತೆ ಇದೆ ಎಂದಾದರೆ ಅದಕ್ಕೆ ನೀಡಿ. ಸಂಪೂರ್ಣವಾಗಿ ಎಲ್ಲೆಡೆ ಹಣ ಕೊಡುವುದನ್ನು ನಿಲ್ಲಿಸಲಾಗಿದೆ ಈ ಭಿಕ್ಷುಕರ ಹಿಂದಿರುವ ಗ್ಯಾಂಗ್ ಒಡೆದು ಹೋಗುತ್ತದೆ. ಮಾನವ ಕಳ್ಳ ಸಾಗಣೆ ಹಾಗೂ ಮಕ್ಕಳು ಮತ್ತು ಮಹಿಳೆಯರಿಗೆ ಕೊಡುವ ಹಿಂಸೆಯನ್ನು ತಪ್ಪಿಸಬಹುದು ಎಂದು ಹೇಳುತ್ತಾರೆ.
 
ಹತ್ತು ವಾರಗಳಿಂದ ನಮ್ಮ ಬೆಂಗಳೂರು ಹುಡುಗರು ತಂಡದ ಸದಸ್ಯರು ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಬೆಂಗಳೂರು ಸಂಚಾರ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡ ಮತ್ತು ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಅಧಿಕೃತ ಒಪ್ಪಿಗೆಯನ್ನು ಪಡೆದಿದ್ದಾರೆ. ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಕೂಡ ಈ ವಿಚಾರಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಲಾಗಿದೆ ವಿನೋದ್ ಮಾಹಿತಿ ಬಳಕೆ.
ಬಿಕ್ಷೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ