ಗೂಗಲ್‌ ಮ್ಯಾಪ್‌ನಲ್ಲಿ ರಾಜಧಾನಿ ಬೆಂಗಳೂರಿನ ರಸ್ತೆಗುಂಡಿಗಳ ಅಡ್ರೆಸ್‌

ಗುರುವಾರ, 22 ಸೆಪ್ಟಂಬರ್ 2022 (16:06 IST)
ಬೆಂಗಳೂರಿನಲ್ಲಿ ಹದಗೆಟ್ಟ ರಸ್ತೆಗಳಿಂದ ಜನರು ಹೈರಾಣಾಗಿರುವುದು ಹೊಸತೇನಲ್ಲ. ಮೈಸೂರು ರಸ್ತೆಯಲ್ಲಿ 'ಮಂಗಳ ಗ್ರಹದಂತಹ ವಾತಾವರಣ ಕಾಣುತ್ತಿದೆ ನೋಡಿ' ಎಂದು ರಸ್ತೆ ಗುಂಡಿ ಮುಚ್ಚದ ಅಧಿಕಾರಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ ಬಿಸಿ ಮುಟ್ಟಿಸಲಾಗಿತ್ತು. ಈಗ ಗೂಗಲ್‌ ಮ್ಯಾಪ್‌ನಲ್ಲಿ ರಸ್ತೆಗುಂಡಿಗಳ ಅಡ್ರೆಸ್‌ ಸಿಗುತ್ತಿದೆ!
 
ಗೂಗಲ್‌ ಮ್ಯಾಪ್‌ನಲ್ಲಿ ರಸ್ತೆಗುಂಡಿ ಎಲ್ಲಿದೆ ಎಂದು ಸರ್ಚ್‌ ಕೊಟ್ಟರೆ ಅಡ್ರೆಸ್‌ ಅನ್ನು ತೋರಿಸುತ್ತಿದೆ. ಇದೇ ಫೋಟೋವನ್ನು ಜನರು ಪೋಸ್ಟ್‌ ಮಾಡುತ್ತಾ ಅಧಿಕಾರಿಗಳ ಕಾರ್ಯವೈಖರಿಗೆ ಕಾಲೆಳೆಯುತ್ತಿದ್ದಾರೆ. ರಾಜಧಾನಿ ಬೆಂಗಳೂರಿನ ರಸ್ತೆಗುಂಡಿ ವಿಚಾರ ಮತ್ತೆ ವೈರಲ್ ಆಗುತ್ತಿದ್ದು, ರಸ್ತೆಗುಂಡಿಗೆ ಪ್ರತ್ಯೇಕ ವಿಳಾಸ ನೀಡಿರುವ ಕುರಿತು ದೊಡ್ಡ ಚರ್ಚೆಯೇ ನಡೆಯುತ್ತಿದೆ.
ಬೆಳ್ಳಂದೂರು ಹೋಗಲು ರಸ್ತೆಗುಂಡಿಯನ್ನು ಲ್ಯಾಂಡ್‌ ಮಾರ್ಕ್‌ ಆಗಿ ನೀಡಲಾಗಿತ್ತು. ಈ ರಸ್ತೆಗುಂಡಿ ವಿಳಾಸದ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಲ್ಯಾಂಡ್‌ ಮಾರ್ಕ್‌ ಅನ್ನು ಗೂಗಲ್‌ನಿಂದ ತೆಗೆದುಹಾಕಲಾಗಿದೆ. ಆದರೆ, ಈ ಪೋಸ್ಟ್‌ನ ಸ್ಕ್ರೀನ್‌ಶಾಟ್‌ ಸೋಷಿಯಲ್‌ ಮೀಡಿಯಾದಲ್ಲಿ ಹಾಕಿ ನೆಟ್ಟಿಗರು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ